ಮಾ.19: ಆರ್‌ಟಿಒ ವಾಹನ ನೋಂದಣಿ ಇಲ್ಲ

Update: 2018-03-17 12:55 GMT

ಮಂಗಳೂರು, ಮಾ.17: ಮಂಗಳೂರು, ಬಂಟ್ವಾಳ ಮತ್ತು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೋಂದಣಿ ವಿಭಾಗದಲ್ಲಿ ವಾಹನ-4 ಸಾಫ್ಟ್ ವೇರ್‌ನ್ನು ಅನುಷ್ಠಾನಗೊಳಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಮಾ.19ರಂದು ವಾಹನ ನೋಂದಣಿಗೆ ಸಂಬಂಧಿಸಿದ ಎಲ್ಲಾ ವಿಧದ ಶುಲ್ಕ, ದಂಡ, ತೆರಿಗೆ ಸ್ವೀಕಾರ ಸೇರಿದಂತೆ ಆರ್‌ಟಿಒ ಕಚೇರಿಯ ಖಜಾನೆ ವಿಭಾಗವನ್ನು ನಿಲ್ಲಿಸಲಾಗುವುದು ಹಾಗೂ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲಾಗುವುದು.

ಮಾ.27ರಿಂದ ಆರ್‌ಟಿಒ ಕಚೇರಿಯಲ್ಲಿ ವಾಹನ-4 ಸಾಫ್ಟವೇರ್‌ನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗುವುದು. ಸಾರ್ವಜನಿಕರು ಸಹಕರಿಸುವಂತೆ ಮಂಗಳೂರು ಹಾಗೂ ಪುತ್ತೂರು ಆರ್‌ಟಿಒ ಕಚೇರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News