ಅಲ್ ಮದೀನಾ 24ನೆ ಸಂಸ್ಥಾಪನಾ ದಿನಾಚರಣೆ

Update: 2018-03-17 15:22 GMT

ನರಿಂಗಾನ, ಮಾ.17: ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ತನ್ನ 24ನೆ ಸಂಸ್ಥಾಪನಾ ದಿನವನ್ನು ಮಂಜನಾಡಿಯ ಕ್ಯಾಂಪಸ್‌ನಲ್ಲಿ ಶನಿವಾರ ಆಚರಿಸಿತು.

ಈ ಸಂದರ್ಭ ಸಂಸ್ಥೆಯ ವಿದ್ಯಾರ್ಥಿ ಸಂಘಟನೆ ಬಿಶಾರತುಲ್ ಮದೀನಾ ಆಯೋಜಿಸಿದ್ದ ಗ್ರ್ಯಾಂಡ್ ಅಸೆಂಬ್ಲಿಗೆ ಶೈಖುನಾ ಶರಫುಲ್ ಉಲಮಾ ನೇತೃತ್ವ ವಹಿಸಿ ದುವಾ ನೆವೇರಿಸಿದರು. ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ದಅ್ವಾ ಕಾಲೇಜಿನ ಪ್ರಾಂಶುಪಾಲ ಅಬ್ದುಸ್ಸಲಾಂ ಅಹ್ಸನಿ, ವಿದ್ಯಾರ್ಥಿಗಳಾದ ನೌಫಲ್ ಮಲಾರ್, ಅಬ್ದುರ್ರಹ್ಮಾನ್ ವಲಾಲ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಲ್ ಮದೀನಾ ನಿರ್ದೆಶಕರು ಮುಹಮ್ಮದ್ ಕುಂಞಿ ಅಮ್ಜದಿ, ಅಲ್ ಮದೀನಾ ದಮಾಮ್ ಕಮಿಟಿ ಕಾರ್ಯದರ್ಶಿ ಇಸ್ಮಾಯಿಲ್, ಅಲ್ ಮದೀನಾ ಇಂಗ್ಲಿಷ್ ಮೀಡಿಯಂ ಮದ್ರಸ ಸದರ್ ಅಬೂಬಕರ್ ಮದನಿ ಪಡಿಕ್ಕಲ್, ಯತೀಂ ಖಾನ ಮದ್ರಸದ ಸದರ್ ಇರ್ಶಾದ್ ಮದನಿ, ಶಾಲಾ ಸಂಚಾಲಕ ಅಬ್ದುಲ್ಲಾ ಮೋರ್ಲ, ಅಶ್ರಫ್ ಸಖಾಫಿ, ಶರೀಫ್ ಸಅದಿ, ಕಬೀರ್ ಸಅದಿ, ಇಬ್ರಾಹೀಂ ಮದನಿ, ಅನ್ವರ್ ಮರ್ಝೂಖಿ, ಆಡಳಿತಾಧಿಕಾರಿ ಅಬ್ದುಲ್ ಖಾದರ್ ಝುಹ್‌ರಿ, ಅಬ್ದುರ್ರಝಾಕ್, ಹೈದರ್ ಸಖಾಫಿ, ಹಾಫಿಳ್ ಮರ್ಷದ್ ಹುಮೈದಿ, ಹಾಫಿಳ್ ಅಬ್ದುಲ್ ಅಝೀಝ್ ಹಿಮಮಿ, ಇಂಗ್ಲಿಷ್ ಮೀಡಿಯಂ ಪ್ರೈಮರಿ ಸ್ಕೂಲ್ ಪ್ರಾಂಶುಪಾಲ ಮುಹಮ್ಮದ್, ಕನ್ನಡ ಪ್ರೌಢ ಶಾಲೆಯ ಪ್ರಾಂಶುಪಾಲ ಹಾರಿಸ್ ಸರ್, ಬಿಶಾರತುಲ್ ಮದೀನಾ ಅಧ್ಯಕ್ಷ ಇಫಾಝ್ ತಮೀಮ್, ಪ್ರ. ಕಾರ್ಯದರ್ಶಿ ಜುನೈದ್ ಟಿ. ಸಹಿತ ಸಂಸ್ಥೆಯ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಅಲ್ ಮದೀನಾ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್‌ನ ಪ್ರಾಂಶುಪಾಲ ಮುಕಮ್ಮದ್ ಹನೀಫ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News