ಲಿಂಗಪ್ಪಯ್ಯಕಾಡಿನ ಚೂರಿ ಇರಿತ ಪ್ರಕರಣ : ಆರೋಪಿಗಳ ಬಂಧನ

Update: 2018-03-17 18:38 GMT
ಹರೀಶ ಪೂಜಾರಿ, ಜಗನ್ನಾಥ್ ಆಚಾರಿ

ಮುಲ್ಕಿ,ಮಾ.17:ಕಳೆದ ದಿನಗಳ ಹಿಂದೆ ಮುಲ್ಕಿ ಠಾಣಾ ವ್ಯಾಪ್ತಿಯ ಕೆಎಸ್‍ರಾವ್ ನಗರದ ಲಿಂಗಪ್ಪಯ್ಯಕಾಡು ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ಸಂಬಂದಿಸಿದಂತೆ ಶಂಕರಲಿಂಗೇಗೌಡ ಮತ್ತು ಇನ್ನೊಬ್ಬರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂದಪಟ್ಟಂತೆ ಮುಲ್ಕಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳನ್ನು ಕೆಎಸ್‍ರಾವ್ ನಗರದ ಶ್ಮಶಾನ ಬಳಿಯ ನಿವಾಸಿ ಜಗ್ಗು ಯಾನೆ ಜಗನ್ನಾಥ್ ಆಚಾರಿ ಮತ್ತು ಕೊಲ್ನಾಡು ಕೆಇಬಿ ಬಳಿಯ ನಿವಾಸಿ ಹರೀಶ ಪೂಜಾರಿ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಹಲ್ಲೆಗೆ ಬಳಸಲಾದ ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಶುಕ್ರವಾರ ಕೆಎಸ್‍ರಾವ್ ನಗರದ ಲಿಂಗಪ್ಪಯ್ಯಕಾಡಿನಲ್ಲಿ ಕೊರಗಜ್ಜ ಕೋಲ ನಡೆಯುತ್ತಿದ್ದ ರಾತ್ರಿ 12 ಗಂಟೆ ಹೊತ್ತಿನಲ್ಲಿ ಜಗ್ಗು ಯಾನೆ ಜಗನ್ನಾಥ್ ಆಚಾರಿ ಎಂಬಾತನು ಕೆಟರಿಂಗ್‍ನಲ್ಲಿ ಕೆಲಸ ಮಾಡುತ್ತಿದ್ದ ಶಂಕರಲಿಂಗೇಗೌಡ ಜೊತೆ ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ಏಕಾಏಕಿ ದಾಳಿ ನಡೆಸಿದ ಜಗದೀಶ್ ಮತ್ತಿತರರ ತಂಡ ಚೂರಿಯಿಂದ ಹಿಗ್ಗಾಮಗ್ಗಾ ಶಂಕರಲಿಂಗನಿಗೆ ಇರಿದಿದ್ದು ಇದನ್ನು ತಡೆಯಲು ಬಂದ ಇನ್ನೊಬ್ಬರಿಗೂ ತಂಡವು ಥಳಿಸಿತ್ತು.

ಚೂರಿ ಇರಿತದಿಂದ ತೀವ್ರ ಗಾಯಗೊಂಡ ಶಂಕರಲಿಂಗೆಗೌಡ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News