ಬಂಟ್ವಾಳ: ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ 'ಯುನಿಟ್ ಸಬಲೀಕರಣ ಕ್ಯಾಂಪ್'

Update: 2018-03-18 18:13 GMT

ಬಂಟ್ವಾಳ,ಮಾ.18: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದ ಪ್ರಕಾರ, ಪಾಣೆಮಂಗಳೂರು ಸೆಕ್ಟರ್ ವ್ಯಾಪ್ತಿಯ ಯುನಿಟ್ ಸಬಲೀಕರಣ ಕ್ಯಾಂಪ್ ಇಂದು ಮಧ್ಯಾಹ್ನ ಗೋಳಿಪಡ್ಪು ಮದರಸ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಹ್ಯಾ ಮದನಿ ಆಲಡ್ಕರವರು ವಹಿಸಿದ್ದರು. ಜಿ.ಎಂ ಶಫೀಕ್ ಸಖಾಫಿ ಆಲಡ್ಕ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಪ್ರಾಸ್ತಾವಿಕ ಭಾಷಣ ಮಾಡಿದ ಮೆದು ಮದನಿ 'ಸಾಂಘಿಕ ಶಕ್ತಿಯ ಅಡಿಪಾಯ ಪ್ರತೀ ಯುನಿಟ್ ಕಾರ್ಯಕರ್ತನೇ ಆಗಿದ್ದಾನೆ. ಕಾರ್ಯಕರ್ತನ ಶ್ರಮ, ತ್ಯಾಗವಿಲ್ಲದೇ ಸಂಘಟನೆ ಬಲಿಷ್ಠಗೊಳ್ಳಲು ಸಾಧ್ಯವಿಲ್ಲ. ತನ್ನ ವೃದ್ದಾಪ್ಯ ಸಮಯದಲ್ಲೂ ಸಂಘಟನೆಯ ಎಲ್ಲಾ ಕಾರ್ಯಕ್ರಮ, ಮೀಟಿಂಗ್ ಗಳಿಗೂ ತಪ್ಪದೇ ಹಾಜರಾಗುತ್ತಿದ್ದ ತಾಜುಲ್ ಉಲಮಾರವರಾಗಿದ್ದಾರೆ ನಮ್ಮ ಆದರ್ಶ. ಅವರನ್ನು ಅನುಸರಿಸಿ ನಡೆಯುವ ಈ ಸಂಘಟನೆಗಾಗಿ ಕಾರ್ಯಾಚರಿಸಿದರೆ, ಅದು ಎಂದಿಗೂ ನಮಗೆ ನಷ್ಟವಾಗದು' ಎಂದು ಆವರು ಹೇಳಿದರು.

ಕಾರ್ಯಕ್ರಮದಲ್ಲಿ ಪಾಣೆಮಂಗಳೂರು ಸೆಕ್ಟರ್ ವ್ಯಾಪ್ತಿಯ ವಿವಿಧ ಯುನಿಟ್ ನ ಕಾರ್ಯಕರ್ತರು, ಯುನಿಟ್ ಪದಧಿಕಾರಿಗಳು ಹಾಗೂ ಸೆಕ್ಟರ್ ನಾಯಕರು, ಹಾಜರಿದ್ದರು. ಅನ್ಸಾರ್ ಕಾರಾಜೆರವರು ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News