ಆರುಷಿ ತಲ್ವಾರ್ ಪ್ರಕರಣ: ತಲ್ವಾರ್ ದಂಪತಿ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ ಮನವಿ ಸ್ವೀಕಾರ
ಹೊಸದಿಲ್ಲಿ, ಮಾ. 19: ಆರುಷಿ ಹಾಗೂ ಕೆಲಸದಾಳು ಹೇಮರಾಜ್ ಹತ್ಯೆ ಪ್ರಕರಣದಲ್ಲಿ ರಾಜೇಶ್ ಹಾಗೂ ನೂಪುರ್ ತಲ್ವಾರ್ ಅವರನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಎರಡು ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಸ್ವೀಕರಿಸಿದೆ.
ಸಿಬಿಐ ಹಾಗೂ ಹೇಮರಾಜ್ ಅವರ ಪತ್ನಿ ಖುಮ್ಕಾಲಾ ಬಂಜಾಡೆ ಈ ಈ ಮನವಿ ಸಲ್ಲಿಸಿದ್ದಾರೆ.
ಸಿಬಿಐ ಸಲ್ಲಿಸಿದ ಮನವಿಯಲ್ಲಿ, ತಲ್ವಾರ್‌ಗೆ ಕ್ಲೀನ್ ಚಿಟ್ ನೀಡಿರುವುದರಲ್ಲಿ ಹಲವು ತಪ್ಪಾಗಿದೆ ಎಂದೆ ಹೇಳಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ ಬಂಜಾಡೆ, ತನ್ನ ಪತಿಯನ್ನು ಹತ್ಯೆಗೈಯಲಾಗಿದೆ ಎಂಬುದನ್ನು ಉಚ್ಚ ನ್ಯಾಯಾಲಯ ಒಪ್ಪಿಕೊಂಡಿದೆ ಹಾಗೂ ಹತ್ಯೆಯ ಹಿಂದಿನ ಸಂಚನ್ನು ಬಹಿರಗಂಗೊಳಿಸುವ ಜವಾಬ್ದಾರಿಯಿಂದ ಸಿಬಿಐ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
‘‘ನಾವು ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಬಂದಿದ್ದೇವೆ. ಉಚ್ಚ ನ್ಯಾಯಾಲಯ ಅವರನ್ನು ಬಿಡುಗಡೆಗೊಳಿಸಿದೆ. ಅವರು ಕೊಲೆಗಾರರು...ಅವರಿಗೆ ಶಿಕ್ಷೆ ನೀಡಬೇಕು’’ ಎಂದು ಬಂಜಾಡೆ ಆಗ್ರಹಿಸಿದ್ದಾರೆ.