ಆದಿತ್ಯನಾಥ್ ಸರಕಾರ ಏನನ್ನೂ ಮಾಡಿಲ್ಲ: ಅಖಿಲೇಶ್
Update: 2018-03-19 20:22 IST
ಲಕ್ನೋ, ಮಾ. 19: ಉತ್ತರಪ್ರದೇಶದ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಇದುವರೆಗೆ ಗಮನಾರ್ಹವಾದ ಏನನ್ನೂ ಮಾಡಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೋಮವಾರ ಹೇಳಿದ್ದಾರೆ.
ನಿಜವಾದ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯುವುದು ಬಿಜೆಪಿಯ ನಡತೆ. ಕೇವಲ ಪ್ರಾದೇಶಿಕ ಪಕ್ಷಗಳು ಮಾತ್ರ ಬಿಜೆಪಿಯ ನಡತೆಯನ್ನು ನಿಲ್ಲಿಸಲು ಸಾಧ್ಯ ಎಂದು ಅವರು ಹೇಳಿದರು.
ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಖಿಲೇಶ್ ಯಾದವ್, ಬಿಜೆಪಿ ಸರಕಾರದ ನೇತೃತ್ವ ವಹಿಸಿದ ಆದಿತ್ಯನಾಥ್ ಮೊದಲ ಒಂದು ವರ್ಷದಲ್ಲಿ ವಿವಿಧ ಯೋಜನೆಗಳಲ್ಲಿದ್ದ ಸಮಾಜವಾದಿ ಪದ ತೆಗೆಯಲು ವಿನಿಯೋಗಿಸಿತು ಎಂದರು.
ಬಿಜೆಪಿ ಸಮಾಜವನ್ನು ಧರ್ಮ ಹಾಗೂ ಉತ್ಸವದ ಅಡಿಯಲ್ಲಿ ವಿಭಜಿಸುತ್ತಿದೆ. ಚುನಾವಣಾ ಪ್ರಣಾಳಿಕೆಯ ನೀಡಲಾದ ಯಾವ ಭರವಸೆಯನ್ನೂ ಬಿಜೆಪಿ ಈಡೇರಿಸಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದರು.