ಉಡುಪಿ: ಮೀನುಗಾರರ ಮನೆಯಲ್ಲಿ ನೀರುದೋಸೆ -ಸಿಗಡಿ ಗಸಿ ಸವಿದ ರಾಹುಲ್ ಗಾಂಧಿ

Update: 2018-03-20 15:40 GMT

ಪಡುಬಿದ್ರೆ, ಮಾ.20: ತೆಂಕಎರ್ಮಾಳಿನ ಗ್ರಾಪಂ ಉಪಾಧ್ಯಕ್ಷ ಕಿಶೋರ್ ಕುಮಾರ್ ಮನೆಗೆ ಅಪರಾಹ್ನ 12:15ರ ಸುಮಾರಿಗೆ ಆಗಮಿಸಿದ ರಾಹುಲ್ ಗಾಂಧಿ ಮನೆಯಲ್ಲೇ ತಯಾರಿಸಲಾದ ನೀರು ದೋಸೆ, ಎಟ್ಟಿ ಗಸಿ, ಮಾಂಜಿ ಗಸಿ ಹಾಗೂ ಅಂಜಲ್ ಪ್ರೈಯನ್ನು ಮನೆಯ ಜಗಲಿಯಲ್ಲಿ ಕುಳಿತು ಸವಿದರು. ಮೊದಲು ಎಳನೀರು ಕುಡಿದ ರಾಹುಲ್ ಗಾಂಧಿ, ನಂತರ ಮುಖಂಡರಾದ ವೇಣುಗೋಪಾಲ್, ಪ್ರಮೋದ್, ಸೊರಕೆ ಜೊತೆ ನೀರುದೋಸೆ ಸಿಗಡಿ ಗಸಿಯನ್ನು ಸವಿದರು. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇವಲ ಸಿಗಡಿ ಗಸಿಯ ರುಚಿಯನ್ನು ಮಾತ್ರ ನೋಡಿದರು.

"ನಿನ್ನೆ ಸಂಜೆ ರಾಹುಲ್ ಗಾಂಧಿ ನಮ್ಮ ಮನೆಗೆ ಬರುವ ಬಗ್ಗೆ ಮುಖಂಡರು ತಿಳಿಸಿದ್ದರು. ಅದರಂತೆ ಇಂದು ಬೆಳಗ್ಗೆ ನನ್ನ ತಾಯಿ ಕುಸುಮಾ ಹಾಗೂ ನೆರೆ ಮನೆಯ ಉಮಾವತಿ ಬಂಗೇರ ಅವರು ಈ ಅಡುಗೆಯನ್ನು ತಯಾರಿಸಿದ್ದಾರೆ. ರಾಹುಲ್ ಗಾಂಧಿ ನಾಲ್ಕು ನೀರು ದೋಸೆ ತಿಂದರು. ಎಟ್ಟಿ ಗಸಿಯನ್ನು ಹೆಚ್ಚು ಬಾರಿ ಹಾಕಿಸಿಕೊಂಡು ರುಚಿ ನೋಡಿದರು. ಅದೇ ರೀತಿ ಅಂಜಲ್ ಪ್ರೈ ಹಾಗೂ ಮಾಂಜಿ ಗಸಿಯ ರುಚಿಯನ್ನು ಕೂಡ ಸವಿದರು" ಎಂದು ಕಿಶೋರ್ ಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News