ಮರದ ಕೊಂಬೆ ಮುರಿದು ಬಿದ್ದು ಬಿಎಂಎಸ್‍ ರಿಕ್ಷಾ ಸಂಘಟನೆಯ ಕಚೇರಿಗೆ ಹಾನಿ

Update: 2018-03-20 18:48 GMT

ಪುತ್ತೂರು,ಮಾ.21: ಪುತ್ತೂರಿನಲ್ಲಿ ಸೋಮವಾರ ಸಂಜೆ ಬಾರೀ ಗಾಳಿ,ಗುಡುಗಿನೊಂದಿಗೆ ಸುರಿದ ಮಳೆಯಿಂದಾಗಿ ಹಲಸಿನ ಮರದ ಕೊಂಬೆಯೊಂದು ಮುರಿದು ಬಿದ್ದು ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕಚೇರಿಗೆ ಹಾನಿಯಾಗಿದೆ. 

ಪುತ್ತೂರಿನ ಲೋಕೋಪಯೋಗಿ ಇಲಾಖೆಯ ಕಚೇರಿಯ ಪಕ್ಕದಲ್ಲೇ ಇರುವ ಬಿಎಂಎಸ್ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಮತ್ತು ರಿಕ್ಷಾ ಚಾಲಕರ ಸಹಕಾರಿ ಸಂಘದ ಕಚೇರಿ ಇರುವ ಸಿಮೆಂಟ್ ಶೀಟಿನ ಕಟ್ಟಡದ ಮೇಲೆ ಮರದ ಕೊಂಬೆ ಮುರಿದು ಬಿದ್ದಿದೆ. ಇದರಿಂದಾಗಿ ಕಟ್ಟಡದ ಶೀಟಿನ ಮಾಡಿಗೆ ಹಾನಿಯಾಗಿದ್ದು, ಗೋಡೆ ಬಿರುಕು ಬಿಟ್ಟಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News