ಕೊಣಾಜೆ: ಎರಡು ಅಂಗಡಿಗಳಿಗೆ ನುಗ್ಗಿ ಮೊಬೈಲ್,100 ರೂ. ಕದ್ದ ಕಳ್ಳರು

Update: 2018-03-21 07:11 GMT

ಕೊಣಾಜೆ,ಮಾ.21: ಕೊಣಾಜೆ ಮಂಗಳೂರು ವಿವಿ ಬಳಿಯ ಎರಡು ಅಂಗಡಿಗಳ ಬಾಗಿಲು ಮುರಿದು ಒಳನುಗ್ಗಿ ಕಳವಿಗೆ ಯತ್ನಿಸಿದ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಕೊಣಾಜೆಯ ಡಿ.ಎಚ್.ಸ್ಟೋರ್ ಹಾಗೂ ಸಿ.ಎಂ.ಮೊಬೈಲ್ ಅಂಗಡಿಗೆ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದರು. ಡಿ.ಎಚ್.ಸ್ಟೋರ್ ನಿಂದ 100 ರೂ. ಹಾಗೂ ಮೊಬೈಲ್ ಅಂಗಡಿಯಿಂದ ಎರಡು ಮೊಬೈಲ್ ಹಾಗೂ ಹೆಡ್ ಫೋನ್ ಗಳನ್ನು ಕಳ್ಳರು ಕಳ್ಳತ‌ನ ನಡೆಸಿದ್ದಾರೆ.

ಅಂಗಡಿಯಲ್ಲಿ ಲ್ಯಾಪ್ ಟಾಪ್ ಇತರ ಬೆಲೆಬಾಳುವ ವಸ್ತುಗಳಿದ್ದರೂ ಯಾವುದನ್ನೂ ಕಳವು ನಡೆಸಿಲ್ಲ. ಈ ಬಗ್ಗೆ ಕೊಣಾಜೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News