ಎಲ್ಲರೂ ಫೇಸ್ ಬುಕ್ ಡಿಲಿಟ್ ಮಾಡಿ ಎಂದ ವಾಟ್ಸ್ ಆ್ಯಪ್ ಸಹ ಸಂಸ್ಥಾಪಕ!

Update: 2018-03-21 08:13 GMT

ಹೊಸದಿಲ್ಲಿ, ಮಾ.21: ಸಾಮಾಜಿಕ ಜಾಲತಾಣ ವಾಟ್ಸ್ ಆ್ಯಪ್ ನ ಸಹ ಸಂಸ್ಥಾಪಕ ಬ್ರಿಯಾನ್ ಆ್ಯಕ್ಟನ್ “ಪ್ರತಿಯೊಬ್ಬರೂ ಫೇಸ್ ಬುಕ್ ಅನ್ನು ಡಿಲಿಟ್ ಮಾಡಿ” ಎಂದು ಹೇಳಿದ್ದು, ಭಾರೀ ವಿವಾದ ಸೃಷ್ಟಿಸಿದೆ. “ಫೇಸ್ ಬುಕ್ ಅನ್ನು ಡಿಲಿಟ್ ಮಾಡಲು ಇದು ಸೂಕ್ತ ಸಮಯ” ಎಂದವರು ಟ್ವೀಟ್ ಮಾಡಿದ್ದಾರೆ.

ಫೇಸ್ ಬುಕ್ ಬಳಕೆದಾರರ ಅನುಮತಿಯಿಲ್ಲದೆ ರಾಜಕೀಯ ದತ್ತಾಂಶ ವಿಶ್ಲೇಷಣೆ ಸಂಸ್ಥೆ ಕೇಂಬ್ರಿಜ್ ಅನಾಲಿಟಿಕಾ 50 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಡಾಟಾಗಳನ್ನು ಪಡೆದ ವಿಚಾರ ವಿವಾದ ಸೃಷ್ಟಿಸುತ್ತಲೇ ಬ್ರಿಯಾನ್ ಈ ಟ್ವೀಟ್ ಮಾಡಿದ್ದಾರೆ.

19 ಬಿಲಿಯನ್ ಡಾಲರ್ ಗಳಿಗೆ 2014ರಲ್ಲಿ ಫೇಸ್ ಬುಕ್ ವಾಟ್ಸ್ ಆ್ಯಪನ್ನು ಖರೀದಿಸಿತ್ತು. ಮಾರಾಟವಾದ ಮೇಲೂ ಬ್ರಿಯಾನ್ ಫೇಸ್ ಬುಕ್ ಜೊತೆಗೇ ಇದ್ದರು. ಆದರೆ ಸಿಗ್ನಲ್ ಫೌಂಡೇಶನ್ ಎನ್ನುವ ಹೊಸ ಕಂಪೆನಿಯ ಸ್ಥಾಪನೆಗಾಗಿ ಅವರು ಈ ವರ್ಷದ ಆರಂಭದಲ್ಲಿ ಫೇಸ್ ಬುಕ್ ತೊರೆದರು.

ರಾಜಕೀಯ ದತ್ತಾಂಶ ವಿಶ್ಲೇಷಣೆ ಸಂಸ್ಥೆ ಕೇಂಬ್ರಿಜ್ ಅನಾಲಿಟಿಕಾ 50 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಡಾಟಾಗಳನ್ನು ಅವರ ಒಪ್ಪಿಗೆಯಿಲ್ಲದೇ ಪಡೆದಿದೆ ಎನ್ನುವ ವರದಿ ವಿವಾದ ಸೃಷ್ಟಿಸಿದ ನಂತರ ಫೇಸ್ ಬುಕ್ ಶೇರ್ ಗಳು 7 ಶೇ.ದಷ್ಟು ಕುಸಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News