ಕಾಬೂಲ್ ನಲ್ಲಿ ಬಾಂಬ್ ಸ್ಫೋಟ: 26 ಮಂದಿ ಮೃತ್ಯು
Update: 2018-03-21 14:15 IST
ಕಾಬೂಲ್, ಮಾ. 21: ಆತ್ಮಹತ್ಯ ಬಾಂಬರ್ ಒಬ್ಬ ಬುಧವಾರ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ಆರಾಧನಾಲಯವೊಂದರ ಸಮೀಪ ತನ್ನನ್ನು ತಾನು ಸ್ಫೋಟಿಸಿಕೊಂಡಾಗ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ ಹಾಗೂ 18 ಮಂದಿ ಗಾಯಗೊಂಡಿದ್ದಾರೆ.
ಪರ್ಸಿಯನ್ ಹೊಸ ವರ್ಷಾಚರಣೆಯಲ್ಲಿ ಅಫ್ಘಾನ್ ರಾಜಧಾನಿ ತೊಡಗಿರುವಂತೆಯೇ ಈ ದಾಳಿ ನಡೆದಿದೆ.
ಕಾರ್ಟೆ ಸಖಿ ಎಂಬ ಶಿಯಾ ಪ್ರಾರ್ಥನಾಲಯದ ಬಳಿ ಬಾಂಬರ್ ದಾಳಿ ನಡೆಸಿದನು ಎಂದು ಆಂತರಿಕ ಸಚಿವಾಲಯದ ಉಪ ವಕ್ತಾರ ನಸ್ರತ್ ರಹೀಮಿ ‘ರಾಯ್ಟರ್ಸ್’ಗೆ ತಿಳಿಸಿದರು. ಈ ಪ್ರಾರ್ಥನಾ ಮಂದಿರ ಮೇಲೆ ಹಿಂದೆಯೂ ದಾಳಿಗಳು ನಡೆದಿದ್ದವು.
ಜನವರಿಯಲ್ಲಿ ಅಫ್ಘಾನಿಸ್ತಾನ ರಾಜಧಾನಿಯಲ್ಲಿ ನಡೆದ ಸ್ಫೋಟದಲ್ಲಿ ಸುಮಾರು 100 ಮಂದಿ ಪ್ರಾಣ ಕಳೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.
ಪ್ರಾರ್ಥನಾಲಯದಿಂದ ಜನರು ಹೊರಗೆ ಬರುತ್ತಿದ್ದಾಗ ಸ್ಫೋಟ ನಡೆದಿದೆ.