ಕಾಲ್ ಡಾಟಾ ರೆಕಾರ್ಡ್ ಪ್ರಕರಣದಲ್ಲಿ ಬಾಲಿವುಡ್ ನ ಈ ಪ್ರಸಿದ್ಧ ನಟಿಯ ಹೆಸರು !

Update: 2018-03-21 17:39 GMT

ಥಾಣೆ, ಮಾ. 21: ಕೂತೂಹಲ ಮೂಡಿಸಿದ ಕಾಲ್ ಡಾಟಾ ರೆಕಾರ್ಡ್ ಪ್ರಕರಣದಲ್ಲಿ ಪೊಲೀಸರು ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರ ಹೆಸರು ಉಲ್ಲೇಖಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರ ಬಂಧಿತರಾಗಿರುವ ವಕೀಲ ರಿಝ್ವೆನ್ ಸಿದ್ದೀಕ್ ಅವರಿಗೆ ಹೃತಿಕ್ ರೋಶನ್ ಮೊಬೈಲ್ ಸಂಖ್ಯೆ ನೀಡಿದ ಆರೋಪಕ್ಕೆ ಅವರು ಒಳಗಾಗಿದ್ದಾರೆ.

ಸೆಲೆಬ್ರಿಟಿಗಳ ವಕೀಲ ಹಾಗೂ ಕಂಗನಾ, ನವಾಜುದ್ದೀನ್ ಸಿದ್ದೀಕಿ ಅವರನ್ನು ಪ್ರತಿನಿಧಿಸುತ್ತಿರುವ ಸಿದ್ದೀಕಿ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ನವಾಜುದ್ದೀನ್ ಸಿದ್ದೀಕಿ ಪತ್ನಿ ಬಗ್ಗೆ ಬೇಹುಗಾರಿಕೆ ಮಾಡಿದ ಆರೋಪಕ್ಕೆ ಅವರು ಒಳಗಾಗಿದ್ದಾರೆ. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಕಂಗನಾ ಹೃತಿಕ್ ರೋಶನ್ ಅವರ ಮೊಬೈಲ್ ಸಂಖ್ಯೆಯನ್ನು 2016ರಲ್ಲಿ ಆರೋಪಿಗೆ ನೀಡಿದ್ದರು. ಇದರ ಉದ್ದೇಶದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News