ಮಾ.23ರಿಂದ ಬಿಗ್ ಬಝಾರ್‌ ನಲ್ಲಿ ಮೊಟ್ಟಮೊದಲ ಉಚಿತ ಶಾಪಿಂಗ್ ವೀಕೆಂಡ್

Update: 2018-03-23 05:13 GMT

ಮಂಗಳೂರು, ಮಾ. 21: ಫ್ಯೂಚರ್ ಗ್ರೂಪ್‌ನ ಅಗ್ರಗಣ್ಯ ಹೈಪರ್ ಮಾರ್ಕೆಟ್ ಸರಣಿಯಾದ ಬಿಗ್ ಬಝಾರ್, ಮೊಟ್ಟಮೊದಲ ಬಾರಿಗೆ ಮೂರು ದಿನಗಳ ಉಚಿತ ಶಾಪಿಂಗ್ ವೀಕೆಂಡ್ ಅನ್ನು  ಮಾ. 23ರಿಂದ ಮಾ. 25ರವರೆಗೆ ಹಮ್ಮಿಕೊಂಡಿರುವುದಾಗಿ ಘೋಷಿಸಿದೆ.

ಬಿಗ್ ಬಝಾರ್‌ನ ಉಚಿತ ಶಾಂಪಿಂಗ್ ವೀಕೆಂಡ್ ದೇಶದ 250ಕ್ಕೂ ಹೆಚ್ಚು ಮಳಿಗೆಗಳಲ್ಲಿ ನಡೆಯಲಿದೆ. ಗ್ರಾಹಕರು 2000 ರೂ. ಮೌಲ್ಯದ ಶಾಂಪಿಂಗ್ ಮಾಡಿದಲ್ಲಿ 1000 ರೂ. ಮೌಲ್ಯದ ಸಿದ್ಧ ಉಡುಪು ಕೂಪನ್, 500 ರೂ. ಮೌಲ್ಯದ ಗೃಹಬಳಕೆ ಮತ್ತು ಕಿಚನ್‌ವೇರ್ ಕೂಪನ್ ಮತ್ತು 500 ರೂ. ಮೌಲ್ಯದ ದಿನಸಿ ಉತ್ಪನ್ನಗಳು ಹೀಗೆ ಅಷ್ಟೂ ಮೌಲ್ಯವನ್ನು ವಾಪಾಸು ಪಡೆಯಬಹುದಾಗಿದೆ.

ಹೆಚ್ಚುವರಿಯಾಗಿ ಮತ್ತೊಂದು ಆಫರ್ ಲಭ್ಯವಿದ್ದು, ಎಲ್ಲ ಹೊಸ ಫ್ಯೂಚರ್ ಪೇ (ಇ- ವ್ಯಾಲೆಟ್) ಬಳಕೆದಾರರು 500 ರೂ. ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದೆ. ಆದರೆ ಇದು 2000 ರೂ. ಮತ್ತು ಹೆಚ್ಚಿನ ಮೌಲ್ಯದ ಖರೀದಿಗೆ ಮಾತ್ರ ಲಭ್ಯ. ಉಚಿತ ಶಾಪಿಂಗ್ ವೀಕೆಂಡ್ ಅತ್ಯುತ್ತಮ ಕೊಡುಗೆಗಳನ್ನು ನೀಡಲಿದ್ದು, ವಿಸ್ತತ ಶ್ರೇಣಿ ಉತ್ಪನ್ನಗಳಾದ ತಿಂಡಿ ತಿನಸು, ಆಹಾರ, ಸಾಂಬಾರ, ಚಹಾ, ಪಾನೀಯ, ಸಿದ್ಧ ಉಡುಪು, ಪಾದರಕ್ಷೆ, ಗೃಹ ಆರೈಕೆ ಉತ್ಪನ್ನಗಳು, ಹೋಮ್ ಫ್ಯಾಷನ್, ಕಿಚನ್‌ವೇರ್ ಮತ್ತಿತರ ಉತ್ಪನ್ನಗಳು ಲಭ್ಯ.

ಈ ಅಭಿಯಾನದ ಬಗ್ಗೆ ಮಾತನಾಡಿದ ಬಿಗ್ ಬಝಾರ್ ಸಿಇಒ ಸದಾಶಿವ ನಾಯಕ್, "ಒಂದು ಬ್ರಾಂಡ್ ಆಗಿ ನಾವು ಯಾವಾಗಲೂ, ನಮ್ಮ ಗ್ರಾಹಕರಿಗೆ ವಿಶಿಷ್ಟವಾದ ಅಂಶಗಳನ್ನು ನೀಡುತ್ತೇವೆ. ಇದರಿಂದಾಗಿ ಬಿಗ್‌ಬಝಾರ್‌ನಲ್ಲಿ ಶಾಪಿಂಗ್ ಮಾಡುವುದು ಅದ್ಭುತ ಅನುಭವವಾಗಿದೆ. ಮೂರು ದಿನಗಳ ಉಚಿತ ಶಾಪಿಂಗ್ ವೀಕೆಂಡ್, ನಮ್ಮ ಗ್ರಾಹಕರಿಗೆ ಖರೀದಿಗೆ ಹೆಚ್ಚಿನ ಶಕ್ತಿ ತುಂಬಲಿದ್ದು, ಒತ್ತಡ ರಹಿತ ಶಾಪಿಂಗ್ ಅನುಭವಿಸಲು ನೆರವಾಗಲಿದೆ. ಗ್ರಾಹಕರು ತಾವು ವೆಚ್ಚ ಮಾಡುವ ಮೌಲ್ಯದ ದುಪ್ಪಟ್ಟಿನಷ್ಟು ಪ್ರಮಾಣದ ಖರೀದಿ ಮಾಡಲು ಅವಕಾಶವಿದ್ದು, ನಮ್ಮ ವಿಸ್ತತ ಶ್ರೇಣಿಯ ಉತ್ಪನ್ನಗಳಲ್ಲಿ ಖರೀದಿ ಮಾಡಬಹುದಾಗಿದೆ. ನಮ್ಮ ಗ್ರಾಹಕರಿಗೆ ಮೊಟ್ಟಮೊದಲ ಬಾರಿಗೆ ನೀಡಿರುವ ಈ ಅವಕಾಶವನ್ನು ಬಳಸಿಕೊಳ್ಳು ಕೋರುತ್ತೇವೆ" ಎಂದು ಹೇಳಿದ್ದಾರೆ.

ಈ ಉಚಿತ ಶಾಪಿಂಗ್ ವೀಕೆಂಡ್ ತಪ್ಪಿಸಿಕೊಳ್ಳಲು ಇಚ್ಛಿಸದ ಗ್ರಾಹಕರು ಮುಂಗಡವಾಗಿ 100 ರೂಪಾಯಿ ಮೌಲ್ಯದ ಟಿಕೆಟ್ ಖರೀದಿಸಬಹುದು. ಇದು ಶಾಪಿಂಗ್ ಬಳಿಕ ಮರುಪಾವತಿಯಾಗುತ್ತದೆ. ಗ್ರಾಹಕರು ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ. ಹೆಚ್ಚುವರಿಯಾಗಿ, ಬಿಗ್‌ಬಝಾರ್, ರೂಪೇ ಜತೆಗೆ ಪಾಲುದಾರಿಕೆಯೊಂದಿಗೆ, ಎಲ್ಲ ಡೆಬಿಟ್ ಕಾರ್ಡ್ ಮೂಲಕ ಮಾಡುವ ಖರೀದಿಗೆ ಶೇಕಡ 10ರಷ್ಟು ಡಿಸ್ಕೌಂಟ್ ಒದಗಿಸಲಿದೆ.

ಬಿಗ್ ಬಝಾರ್ ಬಗ್ಗೆ

ಬಿಗ್‌ಬಝಾರ್, ಫ್ಯೂಚರ್ ಸರಣಿಯ ಪ್ರಮುಖ ಹೈಪರ್ ಮಾರ್ಕೆಟ್ ಚಿಲ್ಲರೆ ಮಾರಾಟ ಸರಣಿಯಾಗಿದೆ. ದೇಶಾದ್ಯಂತ 124 ನಗರಗಳಲ್ಲಿ ಅಸ್ತಿತ್ವ ಹೊಂದಿದೆ. ಭಾರತವನ್ನು ಸುಂದರವಾಗಿ ಮಾಡುವ ಉದ್ದೇಶದೊಂದಿಗೆ, ಬಿಗ್‌ ಬಝಾರ್ ಉತ್ತಮ ಗುಣಮಟ್ಟದ ಉತ್ಪನ್ನವನ್ನು ಕಡಿಮೆ ಬೆಲೆಯಲ್ಲಿ ಒದಗಿಸುತ್ತದೆ.

ಕಡಿಮೆ ವೆಚ್ಚದಲ್ಲಿ ಅಧಿಕ ನೀಡುವ ಭರವಸೆ ನೀಡುವ ಬಿಗ್‌ಬಝಾರ್ 1.6 ಲಕ್ಷ ಸಮೂಹ ಮಾರುಕಟ್ಟೆ ಉತ್ಪನ್ನಗಳನ್ನು ಒದಗಿಸುತ್ತದೆ. ಬಹುತೇಕ ಎಲ್ಲ ಭಾರತೀಯ ಗ್ರಾಹಕರು ಬಯಸುವ ಉತ್ಪನ್ನಗಳನ್ನು ಪೂರೈಸುತ್ತದೆ. ಇದು ಸಾಕಷ್ಟು ಮೌಲ್ಯವರ್ಧನೆ ಸೇವೆಗಳನ್ನೂ ಒದಗಿಸುತ್ತಿದೆ. ವಿಶೇಷ ಡಿಸ್ಕೌಂಟ್‌ಗಳು ಹಾಗೂ ಮಾರಾಟ ಉತ್ತೇಜಕ ಆಫರ್‌ಗಳು, ನಿಯತವಾಗಿ ದೊರೆಯುತ್ತಿರುತ್ತವೆ. ಈ ಮೂಲಕ ಇಡೀ ವಿಧಾನವನ್ನು ವಿಶಿಷ್ಟ ಹಾಗೂ ಅನನ್ಯವೆನಿಸುವಂತೆ ಮಾಡಿದೆ. ಗ್ರಾಹಕರು ಬೆಲೆ, ಅನುಕೂಲತೆ, ವಿಲಾಸಿ, ಗುಣಮಟ್ಟ ಮತ್ತು ಮಳಿಗೆ ಸೇವೆಯ ಮಟ್ಟದಲ್ಲಿ ಹೊಸ ಹಂತವನ್ನು ಅನುಭವಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News