ಮಿಯಾಮಿ ಓಪನ್: ಭಾಂಬ್ರಿ ಗೆಲುವಿನ ಓಟಕ್ಕೆ ಕಡಿವಾಣ

Update: 2018-03-25 18:27 GMT

ಮಿಯಾಮಿ, ಮಾ.25: ಮಿಯಾಮಿ ಓಪನ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.11ನೇ ಆಟಗಾರ ಜಾಕ್ ಸಾಕ್ ಅವರಿಗೆ ಭಾರತದ ಯೂಕಿ ಭಾಂಬ್ರಿ ಶರಣಾಗಿದ್ದಾರೆ.ಈ ಸೋಲಿನೊಂದಿಗೆ ದಿಲ್ಲಿ ಆಟಗಾರ ಭಾಂಬ್ರಿ ಸತತ ಎರಡನೇ ಟೂರ್ನಿಯಲ್ಲಿ ಎರಡನೇ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ.

ಶನಿವಾರ ಒಂದು ಗಂಟೆ, 36 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಅಮೆರಿಕದ ಆಟಗಾರ ಸಾಕ್ ಅವರು ವಿಶ್ವದ ನಂ.104ನೇ ಆಟಗಾರ ಭಾಂಬ್ರಿ ಅವರನ್ನು 6-3, 7-6 ಸೆಟ್‌ಗಳ ಅಂತರದಿಂದ ಮಣಿಸಿದರು. ಭಾಂಬ್ರಿ ಮೊದಲ ಸುತ್ತಿನಲ್ಲಿ ಮಿರ್ಝಾ ಬಾಸಿಕ್ ವಿರುದ್ಧ ಜಯ ಸಾಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News