ವಿಶ್ವದ ನಂ.1 ಆಟಗಾರ್ತಿ ಸಿಮೊನಾಗೆ ಸೋಲು

Update: 2018-03-25 18:29 GMT

ಮಿಯಾಮಿ, ಮಾ.25: ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಪೊಲೆಂಡ್‌ನ ಅಗ್ನೆಸ್ಕಾ ರಾಂಡ್ವಾಂಸ್ಕಾ ವಿರುದ್ಧ ಸೋತು ನಿರ್ಗಮಿಸಿದ್ದಾರೆ. ಸೋಲಿನ ಹೊರತಾಗಿಯೂ ನಂ.1 ಸ್ಥಾನ ಉಳಿಸಿಕೊಳ್ಳುವುದು ಖಚಿತವಾಗಿದೆ.

ಮಹಿಳೆಯರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ರಾಂಡ್ವಾಂಸ್ಕಾ ಅವರು ಸಿಮೊನಾರನ್ನು 3-6,6-2, 6-3 ಸೆಟ್‌ಗಳಿಂದ ಮಣಿಸಿದರು.

ಸಿಮೊನಾ ವಾರದ ಹಿಂದೆ ನಡೆದ ಇಂಡಿಯನ್ ವೆಲ್ಸ್ ಸೆಮಿ ಫೈನಲ್‌ನಲ್ಲಿ ಜಪಾನ್‌ನ ನಯೊಮಿ ಒಸಾಕಾ ವಿರುದ್ಧ ಸೋತಿದ್ದರು. 2012ರ ಮಿಯಾಮಿ ಚಾಂಪಿಯನ್ ರಾಂಡ್ವಾಂಸ್ಕಾ ಮುಂದಿನ ಸುತ್ತಿನಲ್ಲಿ ಮಾಜಿ ವಿಶ್ವದ ನಂ.1 ಆಟಗಾರ್ತಿ ವಿಕ್ಟೋರಿಯ ಅಝರೆಂಕಾರನ್ನು ಎದುರಿಸಲಿದ್ದಾರೆ. ಅಝರೆಂಕಾ ಲಾಟ್ವಿಯದ ಅನಸ್ಟಸಿಜಾ ಸೆವಾಸ್ಟೋವಾರನ್ನು 3-6,6-4, 6-1 ಸೆಟ್‌ಗಳಿಂದ ಮಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News