ಮಂಗಳೂರು: ಬೆನ್‌ಫಿನ್ ಗ್ರೂಪ್ ಇಂಟೀರಿಯರ್ ಆ್ಯಂಡ್ ಕನ್‌ಸ್ಟ್ರಕ್ಷನ್ ಶುಭಾರಂಭ

Update: 2018-03-27 05:10 GMT

ಮಂಗಳೂರು, ಮಾ.26: ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಮಿಸ್ಚೀಫ್ ಮಾಲ್‌ನ 3ನೆ ಮಹಡಿಯಲ್ಲಿ ನೂತನವಾಗಿ ಆರಂಭಿಸಲಾದ ಬೆನ್‌ಫಿನ್ ಗ್ರೂಪ್ ಇಂಟೀರಿಯರ್ ಆ್ಯಂಡ್ ಕನ್‌ಸ್ಟ್ರಕ್ಷನ್ ಸಂಸ್ಥೆ ಇತ್ತೀಚೆಗೆ ಶುಭಾರಂಭಗೊಂಡಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರವೂಫ್ ಪುತ್ತಿಗೆ ಅವರು ಬೆನ್‌ಫಿನ್ ಗ್ರೂಪ್ ಇಂಟೀರಿಯರ್ ಆ್ಯಂಡ್ ಕನ್‌ಸ್ಟ್ರಕ್ಷನ್ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭ ಬೆನ್‌ಫಿನ್ ಗ್ರೂಪ್‌ನ ಅಧ್ಯಕ್ಷ ತುಬೈಸ್ ಅಲ್ ರಾಜ್ಹಿ, ಸಂಸ್ಥೆಯ ಹಣಕಾಸು ನಿರ್ವಾಹಕ ರೋಹಿತ್ ಕರ್ಕೇರ, ವ್ಯವಸ್ಥಾಪಕ ನಿರ್ದೇಶಕ ಇಸ್ಮಾಯೀಲ್ ಸಿ.ಎಂ., ನಿರ್ದೇಶಕ ಖಲೀಲ್ ಇಬ್ರಾಹೀಂ, ರಿಝ್ವಾನ್ ಇಂಜಿನಿಯರ್ ಮತ್ತಿತರರು ಉಪಸ್ಥಿತರಿದ್ದರು.

ಅತಿಥಿಗಳಾಗಿ ತೋಡಾರು ಮಸೀದಿಯ ಅಧ್ಯಕ್ಷ ಅಬ್ದುಲ್ ಸಲಾಂ, ನ್ಯಾಯವಾದಿ ಪುರಂದರ ಶೆಟ್ಟಿ, ತೋಡಾರಿನ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಎಂ.ಎಸ್.ಮೋನು, ಕಾಪುವಿನ ಗ್ರೀನ್ ಪಾರಡೈಸ್‌ನ ನವಾಝ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News