ಭಾರತೀಯರಿಂದ ರೋಗ ನಿರೋಧಕ ಔಷಧಗಳ ಬಳಕೆ ದ್ವಿಗುಣ
ಹೊಸದಿಲ್ಲಿ, ಮಾ. 27: ಭಾರತೀಯರಿಂದ ರೋಗ ನಿರೋಧಕ ಔಷಧಗಳ ಬಳಕೆ ದ್ವಿಗುಣಗೊಂಡಿದೆ. ಇದರ ಬಳಕೆಯಿಂದ ಇ. ಕೋಲಿ, ಗಂಟಲು ಸೋಂಕು, ನ್ಯುಮೋನಿಯಾ ಹಾಗೂ ಕ್ಷಯರೋಗದಂತಹ ಸಾಮಾನ್ಯ ಸೋಂಕುಗಳಿಗೆ ಚಿಕಿತ್ಸೆ ನೀಡುವುದಕ್ಕೆ ಸಮಸ್ಯೆಯಾಗಿದೆ ಎಂದು ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸ್ ಪ್ರೊಸೀಡಿಂಗ್ಸ್ (ಪಿಎಎನ್‌ಎಸ್)ಅಧ್ಯಯನ ಹೇಳಿದೆ.
2015ರಲ್ಲಿ 3.2 ದಶಲಕ್ಷ ಇದ್ದ ರೋಗ ನಿರೋಧಕ ಔಷಧಗಳ ಬಳಕೆ ಈಗ 6.5 ದಶಲಕ್ಷಕ್ಕೆ ಏರಿಕೆಯಾಗಿದೆ. ಇದು ಸಾರ್ವಜನಿಕ, ಖಾಸಗಿ ವಲಯದಲ್ಲಿ ರೋಗ ನಿರೋಧಕ ಹೆಚ್ಚು ಲಭ್ಯವಾಗುತ್ತಿರುವುದು ಹಾಗೂ ಆರ್ಥಿಕ ಬೆಳವಣಿಗೆಯಲ್ಲಾದ ಏರಿಕೆಯನ್ನು ಪ್ರತಿಬಿಂಬಿಸಿದೆ.
2015ರಲ್ಲಿ ಜಾಗತಿಕ ಮಟ್ಟದಲ್ಲಿ ಒಟ್ಟು 35 ದಶಲಕ್ಷ ಜನರು ರೋಗ ನಿರೋಧಕ ಔಷಧಗಳನ್ನು ಬಳಸುತ್ತಿದ್ದರು. 2000ದಿಂದ ಅದರ ಪ್ರಮಾಣ ಶೇ. 65ರಷ್ಟು ಏರಿಕೆಯಾಯಿತು. ಪ್ರಸ್ತುತ 76 ದೇಶಗಳು ರೋಗನಿರೋಧಕ ಔಷಧಗಳನ್ನು ಬಳಸುತ್ತಿದ್ದಾರೆ.
ರೋಗನಿರೋಧಕಗಳ ದುರ್ಬಳಕೆ ಹಾಗೂ ಅತಿ ಬಳಕೆಯಿಂದ ಬ್ಯಾಕ್ಟಿರಿಯ ಸೋಂಕು ನಿಯಂತ್ರಣ ಸುಲಭವಲ್ಲ. ಬದಲಾಗಿ ಇದರಿಂದ ದೇಹ ಔಷಧ ಸ್ವೀಕರಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂದು ಅಧ್ಯಯನ ಹೇಳಿದೆ.