ಎಸ್‌ಸಿ/ಎಸ್‌ಟಿ ಕಾಯ್ದೆ: ಸುಪ್ರೀಂ ಆದೇಶದ ಮರುಪರಿಶೀಲನೆ ಕೋರಿ ಎಲ್‌ಜೆಪಿಯಿಂದ ಅರ್ಜಿ ಸಲ್ಲಿಕೆ

Update: 2018-03-27 15:36 GMT
ಚಿರಾಗ್ ಪಾಸ್ವಾನ

ಹೊಸದಿಲ್ಲಿ,ಮಾ.27: ಬಿಜೆಪಿಯ ಮಿತ್ರಪಕ್ಷವಾಗಿರುವ ಲೋಕ ಜನಶಕ್ತಿ ಪಾರ್ಟಿ(ಎಲ್‌ಜೆಪಿ)ಯು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯಲ್ಲಿನ ಕಠಿಣ ನಿಯಮಗಳನ್ನು ಸಡಿಲಿಸಿರುವ ತನ್ನ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಮಂಗಳವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶವು ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ಹಲ್ಲುಗಳಿಲ್ಲದಂತೆ ಮಾಡಿರುವುದರಿಂದ ಮತ್ತು ಈ ಸಮುದಾಯಗಳಲ್ಲಿ ಆಕ್ರೋಶವನ್ನು ಸೃಷ್ಟಿಸಿರುವುದರಿಂದ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಿರುವುದಾಗಿ ಎಲ್‌ಜೆಪಿಯ ನಾಯಕ ಚಿರಾಗ್ ಪಾಸ್ವಾನ ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ವಿಷಯದಲ್ಲಿ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಬೇಕೇ ಎಂಬ ಬಗ್ಗೆ ಕೇಂದ್ರವು ಈವರೆಗೆ ಸ್ಪಷ್ಟವಾದ ನಿಲುವನ್ನು ತಳೆದಿಲ್ಲವಾದರೂ, ಆಡಳಿತ ಬಿಜೆಪಿಯ ಹಲವರು ಸೇರಿದಂತೆ ದಲಿತ ನಾಯಕರು ಮರುಪರೀಲನೆ ಅರ್ಜಿಯನ್ನು ಸಲ್ಲಿಸಲು ಒಲವು ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ನ್ಯಾಯ ಸಚಿವ ಥಾವರಚಂದ್ ಗೆಹ್ಲೋಟ್ ಅವರು ಸರ್ವೋಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಮರುಪರಿಶೀಲನೆ ಅರ್ಜಿ ಸಲ್ಲಿಕೆಯ ಬಗ್ಗೆ ಒಲವು ವ್ಯಕ್ತಪಡಿಸಿ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರಿಗೆ ಪತ್ರ ಬರೆಯುವ ಮೂಲಕ ಸರಕಾರದೊಳಗೂ ಇಂತಹ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂಬ ಮೊದಲ ಸುಳಿವನ್ನು ನೀಡಿದ್ದಾರೆ.

 ಈ ಆದೇಶವು ಕಾಯ್ದೆಯನ್ನು ಪರಿಣಾಮಹೀನಗೊಳಿಸುತ್ತದೆ ಮತ್ತು ದಲಿತರು ಹಾಗೂ ಬುಡಕಟ್ಟು ಜನರಿಗೆ ನ್ಯಾಯದಾನದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂಬ ಕಳವಳಗಳು ಸೃಷ್ಟಿಯಾಗಿವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News