ದಿಲ್ಲಿಯ ಬೀದಿ ಮಕ್ಕಳಲ್ಲಿ ಮಾದಕ ವ್ಯಸನಿಗಳ ಪ್ರಮಾಣ ಬೆಚ್ಚಿಬೀಳಿಸುವಷ್ಟಿದೆ

Update: 2018-03-28 17:18 GMT

ಹೊಸದಿಲ್ಲಿ, ಮಾ. 27: ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯದ ಮಾಹಿತಿ ಪ್ರಕಾರ ದಿಲ್ಲಿ ಬೀದಿಬದಿಯ ಶೇ. 90ಕ್ಕಿಂತಲೂ ಅಧಿಕ ಮಕ್ಕಳು ಮಾದಕ ವ್ಯಸನಿಗಳು.

ಸಚಿವಾಲಯದ ಪ್ರಕಾರ, ದಿಲ್ಲಿಯಲ್ಲಿ ಕಳೆದ ವರ್ಷ ಬೀದಿ ಮಕ್ಕಳ ಮೇಲಿನ ದೌರ್ಜನ್ಯದ 46,410 ಪ್ರಕರಣಗಳು ದಾಖಲಾಗಿವೆ. ದೌರ್ಜನ್ಯಕ್ಕೆ ಒಳಗಾದ ಹೆಚ್ಚಿನ ಮಕ್ಕಳು ತಂಬಾಕು (21,770), ಮದ್ಯಪಾನ (9,450), ಇನ್‌ಹಾಲೆಂಟ್ (7,910), ಗಾಂಜಾ (5,600) ವ್ಯಸನಿಗಳಾಗಿದ್ದುದು ಪತ್ತೆಯಾಗಿದೆ. ಇದಲ್ಲದೆ ಮಕ್ಕಳು ಇತರ ಮಾದಕ ದ್ರವ್ಯಗಳಾದ ಹೆರಾಯಿನ್ (840), ಅಫೀಮು (420), ಔಷಧೀಯ ಓಪಿಯಾಡ್ಸ್ (210) ಹಾಗೂ ನಿದ್ರಾಜನಕಗಳು (210) ಬಳಕೆ ಮಾಡಿರುವುದು ತಿಳಿದು ಬಂದಿದೆ. ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ಸಹಾಯಕ ಸಚಿವೆ ವಿಜಯ್ ಸಾಂಪ್ರಾ ಈ ದತ್ತಾಂಶವನ್ನು ಲಿಖಿತವಾಗಿ ಲೋಕಸಭೆಯಲ್ಲಿ ಮಂಗಳವಾರ ಹಂಚಿಕೊಂಡರು. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಯನ ಇತ್ತೀಚೆಗಿನ ಅಧ್ಯಯನವನ್ನು ಈ ಅಂಕಿ-ಅಂಶ ಆಧರಿಸಿದೆ.

 ಸರಕಾರೇತರ ಸಂಸ್ಥೆ ‘ಸೇವ್ ದಿ ಚಿಲ್ಡ್ರನ್’ 2011ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ದಿಲ್ಲಿಯ ಬೀದಿಯಲ್ಲಿ ಸುಮಾರು 50,923 ಮಕ್ಕಳು ಜೀವಿಸುತ್ತಿದ್ದಾರೆ. ಈ ಸಂಖ್ಯೆಯಲ್ಲಿ ಶೇ. 91.14ರಷ್ಟು ಮಕ್ಕಳು ಮಾದಕ ವ್ಯಸನಿಗಳು. ಎನ್‌ಸಿಆರ್‌ಬಿ ಪ್ರಕಾರ 2015 ಹಾಗೂ 2016ರಲ್ಲಿ ಮಾದಕ ದ್ರವ್ಯ ಸೇವನೆ ಮಿತಿಮೀರಿ ಅಸಹಜವಾಗಿ ಅಪಘಾತದಿಂದ ಸಾವನ್ನಪ್ಪಿರುವ ಮಕ್ಕಳ ಸಂಖ್ಯೆ ಕ್ರಮವಾಗಿ 53 ಹಾಗೂ 34

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News