×
Ad

ಪಶ್ಚಿಮಬಂಗಾಳ ಹಿಂಸಾಚಾರ: 48 ಮಂದಿಯ ಬಂಧನ

Update: 2018-03-28 23:26 IST

ಕೋಲ್ಕತ್ತಾ, ಮಾ. 28: ಪಶ್ಚಿಮಬಂಗಾಳದ ವಿವಿಧ ಭಾಗಗಳಲ್ಲಿ ರಾಮನವಮಿ ಮೆರವಣಿಗೆ ಸಂದರ್ಭ ನಡೆದ ಕೋಮ ಹಿಂಸಾಚಾರಕ್ಕೆ ಸಂಬಂಧಿಸಿ ಕಳೆದ ಮೂರು ದಿನಗಳಲ್ಲಿ 48 ಮಂದಿಯನ್ನು ಬಂಧಿಸಲಾಗಿದೆ.

ಪುರಾಲಿಯಾ ಜಿಲ್ಲೆಯ ಬೆಲ್ಡಿ ಗ್ರಾಮ, ಪಶ್ಚಿಮ್ ಬುರ್ಡ್ವಾನ್ ಜಿಲ್ಲೆಯ ರಾಣಿಗಂಜ್ ಹಾಗೂ ಉತ್ತರ 24 ಪರಗಣ ಜಿಲ್ಲೆಯ ಕಂಕಿನಾರ್‌ನಲ್ಲಿ ಉದ್ವಿಗ್ನತೆ ಮುಂದುವರಿದಿದ್ದು ಮೂವರು ಸಾವನ್ನಪ್ಪಿದ್ದಾರೆ.

ಪುರುಲಿಯಾ ಹಾಗೂ ರಾಣಿಗಂಜ್‌ನಲ್ಲಿ ಕ್ರಮವಾಗಿ ಮಾರ್ಚ್ 25 ಹಾಗೂ 26ರಂದು ಸಂಭವಿಸಿದ ಕೋಮು ಹಿಂಸಾಚಾರದಲ್ಲಿ ಇಬ್ಬರು ದಿನಗೂಲಿ ನೌಕರರು ಮೃತಪಟ್ಟಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಕಂಕಿನಾರ್‌ನಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಕೋಮು ಹಿಂಸಾಚಾರದಲ್ಲಿ ಗುಂಡು ತಗುಲಿ ಬಲೂನ್ ಮಾರಾಟಗಾರನೋರ್ವ ಮೃತಪಟ್ಟಿದ್ದಾನೆ.

ಪುರುಲಿಯಾ ಘಟನೆಗೆ ಸಂಬಂಧಿಸಿ 17, ರಾಣಿಗಂಜ್ ಹಿಂಸಾಚಾರಕ್ಕೆ ಸಂಬಂಧಿಸಿ 18 ಹಾಗೂ ಕಂಕಿನಾರ್ ಘರ್ಷಣೆಗೆ ಸಂಬಂಧಿಸಿ 13 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News