ಧಾರ್ಮಿಕ ಭಕ್ತಿ ಸೇವೆಯಲ್ಲಿ ಕಾಣುವಂತಾಗಲಿ : ಫಾ. ಫ್ರಾನ್ಸಿಸ್ ಕ್ರಾಸ್ತಾ

Update: 2018-03-29 17:35 GMT

ಮೂಡುಬಿದಿರೆ, ಮಾ. 29: ‘ಯೇಸು ಮರಣಹೊಂದುವ ಹಿಂದಿನ ದಿನ ತನ್ನ ಶಿಷ್ಯರೊಡನೆ ಅಂತಿಮ ಭೋಜನ ಸೇವಿಸಿದ್ದರು. ಆ ದಿನ ಅವರು ತಮ್ಮ ಶಿಷ್ಯರಿಗೆ ರೊಟ್ಟಿಯನ್ನು ಮುರಿದು ಕೊಡುತ್ತಾ ಇದು ನನ್ನ ಶರೀರ ಎಂದು ಹೇಳಿ ದ್ರಾಕ್ಷ್ಯಾರಸವನ್ನು ತೆಗೆದುಕೊಂಡು ಇದು ನನ್ನ ರಕ್ತ, ನಿಮ್ಮ ಪಾಪ ಗಳಿಗೋಸ್ಕರ ಸುರಿಸಲ್ಪಡುವುದು ಎಂದು ಬೋಧಿಸಿದರು. ಈ ಮೂಲಕ ಯೇಸು ಪರಮ ಪವಿತ್ರ ಸಂಸ್ಕಾರವನ್ನು ಸ್ಥಾಪಿಸಿದರು ಹಾಗೂ ಶಿಷ್ಯರ ಕಾಲುಗಳನ್ನು ತೊಳೆದು ಸೇವೆಯ ದೂತರಾಗಲು ಕರೆಯಿತ್ತರು. ಧಾರ್ಮಿಕ ಭಕ್ತಿಯನ್ನು ಸೇವೆಯ ಮೂಲಕ ಪ್ರಕಟಪಡಿಸೋಣ’ ಎಂದು ಶಿರ್ತಾಡಿ ಮೌಂಟ್ ಕಾರ್ಮೆಲ್ ಚರ್ಚ್‍ನ ಧರ್ಮಗುರು ಫಾ. ಫ್ರಾನ್ಸಿಸ್ ಕ್ರಾಸ್ತಾ ನುಡಿದರು.

ಅವರು ಇಂದು ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್‍ನಲ್ಲಿ ನಡೆದ ಪವಿತ್ರ ಗುರುವಾರ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 12 ಶಿಷ್ಯರ ಪಾದಗಳನ್ನು ತೊಳೆದು ಭಕ್ತರಿಗೆ ಯೇಸು ತೋರಿಸಿದ ಧೀನತೆಯ ಪ್ರೀತಿಯ ಬಗೆಗೆ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪರಮ ಪ್ರಸಾದ ಸಂಕೇತವಾದ ಬಿಳಿಬಟ್ಟೆಗಳನ್ನು ತೊಟ್ಟು ಭಕ್ತಿಯಿಂದ ಪಾಲ್ಗೊಂಡರು. ಈ ಸಂದರ್ಭ ವಿವಿಯನ್ ನಿಶಾಂತ್ ರೋಡ್ರಿಗಸ್, ಧಾರ್ಮಿಕ ಭಗಿನಿಯರು, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಫ್ರೆಡ್ ಪಿಂಟೋ, ಕಾರ್ಯದರ್ಶಿ ಮರಿಯಾ ಲೀಟಾ ಪಿರೇರಾ, ಜೊಯೆಲ್ ಸಿಕ್ವೇರಾ, ಪ್ರಸಾದ್ ರೊಡ್ರಿಗಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News