×
Ad

ಸೌದಿ: ಸಂಗಾತಿಯ ಫೋನ್ ಕದ್ದು ನೋಡಿದರೆ ಜೈಲೇ ಗತಿ !

Update: 2018-03-31 22:08 IST

ಲಂಡನ್, ಮಾ. 31: ಹೆಂಡತಿ ಅಥವಾ ಗಂಡನ ಮೊಬೈಲ್ ಫೋನ್ ಮೇಲೆ ಕಾನೂನುಬಾಹಿರವಾಗಿ ಬೇಹುಗಾರಿಕೆ ನಡೆಸುವುದನ್ನು ಸೌದಿ ಅರೇಬಿಯ ದಂಡನೀಯ ಅಪರಾಧವನ್ನಾಗಿಸಿದೆ ಹಾಗೂ ಈ ಕೃತ್ಯವನ್ನು ಸೈಬರ್ ಅಪರಾಧಗಳ ಪಟ್ಟಿಗೆ ಸೇರಿಸಿದೆ.

ತಮ್ಮ ಸಂಗಾತಿಗಳ ಅಪ್ರಾಮಾಣಿಕತೆಯನ್ನು ಸಾಬೀತುಪಡಿಸುವುದಕ್ಕಾಗಿ ಅವರ ಮೊಬೈಲ್ ಫೋನ್‌ಗಳ ಮೇಲೆ ಬೇಹುಗಾರಿಕೆ ನಡೆಸುವಾಗ ಗಂಡಂದಿರು ಅಥವಾ ಹೆಂಡತಿಯರು ಸಿಕ್ಕಿಬಿದ್ದರೆ, ಅವರು ಒಂದು ವರ್ಷದವರಗೆ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು, 5 ಲಕ್ಷ ರಿಯಾಲ್ (ಸುಮಾರು 86 ಲಕ್ಷ ರೂಪಾಯಿ) ದಂಡ ಪಾವತಿಸಬೇಕಾಗಬಹುದು ಅಥವಾ ಇವೆರಡನ್ನೂ ಅನುಭವಿಸಬೇಕಾಗಬಹುದು.

ತಮ್ಮ ಸಂಗಾತಿಗಳ ಮೊಬೈಲ್ ಫೋನ್‌ಗಳನ್ನು ಅವರ ಅನುಮತಿಯಿಲ್ಲದೆ ತಮ್ಮ ವಶಕ್ಕೆ ತೆಗೆದುಕೊಳ್ಳುವ ಜನರಿಗೆ ದಂಡ ಅನ್ವಯವಾಗುತ್ತದೆ ಎಂದು ಕಾನೂನು ಇಲಾಖೆಯ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News