×
Ad

ಪಾಕ್: ಸಬ್‌ಮರೀನ್‌ನಿಂದ ಹಾರಿಸುವ ಕ್ಷಿಪಣಿ ಬಾಬರ್ ಪರೀಕ್ಷೆ

Update: 2018-03-31 22:44 IST

ಇಸ್ಲಾಮಾಬಾದ್, ಮಾ. 31: ಪರಮಾಣು ಸಾಮರ್ಥ್ಯ ಹೊಂದಿರುವ, ‘ಸಬ್‌ಮರೀನ್‌ನಿಂದ ಹಾರಿಸುವ ಕ್ರೂಸ್ ಕ್ಷಿಪಣಿ’ (ಎಸ್‌ಎಲ್‌ಸಿಎಂ) ‘ಬಾಬರ್’ನ ಪ್ರಾಯೋಗಿಕ ಪರೀಕ್ಷೆಯನ್ನು ಪಾಕಿಸ್ತಾನ ಗುರುವಾರ ನಡೆಸಿದೆ.

450 ಕಿ.ಮೀ. ದಾಳಿ ವ್ಯಾಪ್ತಿ ಹೊಂದಿರುವ ಕ್ಷಿಪಣಿಯು ‘ವಿಶ್ವಾಸಾರ್ಹ ಮರುದಾಳಿ (ಸೆಕಂಡ್ ಸ್ಟ್ರೈಕ್) ಸಾಮರ್ಥ್ಯ’ವನ್ನು ಒದಗಿಸುತ್ತದೆ ಎಂದು ಪಾಕಿಸ್ತಾನ ಸೇನೆ ಹೇಳಿದೆ.

ಶತ್ರುವಿನ ಪರಮಾಣು ದಾಳಿಯಲ್ಲಿ ನೆಲದಲ್ಲಿರುವ ಪರಮಾಣು ಶಸ್ತ್ರಗಳು ನಾಶವಾದ ಬಳಿಕವೂ ಪ್ರತೀಕಾರದ ದಾಳಿ ನಡೆಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಪಾಕಿಸ್ತಾನ ಸತತವಾಗಿ ಕೆಲಸ ಮಾಡುತ್ತಿತ್ತು. ಈ ಸಾಮರ್ಥ್ಯವನ್ನು ಭಾರತ ಈಗಾಗಲೇ ಹೊಂದಿದೆ.

ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ ಎಂದು ಪಾಕಿಸ್ತಾನಿ ಸೇನೆಯ ಮಾಧ್ಯಮ ಘಟಕ ಹೇಳಿದೆ.

 ಕ್ಷಿಪಣಿಯು ವಿವಿಧ ಮಾದರಿಯ ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಅದರಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News