ಎನ್‌ಎಂಪಿಟಿಯಿಂದ ದಾಖಲೆ ಸರಕು ನಿರ್ವಹಣೆ

Update: 2018-04-03 10:47 GMT

ಮಂಗಳೂರು, ಎ.3: ಎನ್‌ಎಂಪಿಟಿ (ನವ ಮಂಗಳೂರು ಬಂದರು ಮಂಡಳಿ) 2017-18ನೆ ಸಾಲಿನ ಹಣಕಾಸು ವರ್ಷದಲ್ಲಿ 42.05 ಮಿಲಿಯ ಟನ್ ಸರಕು ನಿರ್ವಹಣೆ ಮೂಲಕ ದಾಖಲೆ ನಿರ್ಮಿಸಿದೆ. 2016-17ನೆ ಅವಧಿಯಲ್ಲಿ ಈ ಸರಕು ನಿರ್ವಹಣೆ 39.94 ಮಿಲಿಯ ಟನ್ ಆಗಿತ್ತು ಎಂದು ಪ್ರಕಟನೆ ತಿಳಿಸಿದೆ. 

ಕೇಂದ್ರ ಸಚಿವಾಲಯವು ಎನ್‌ಎಂಪಿಟಿಗೆ ನಿಗದಿಪಡಿಸಿದ್ದ 41 ಮಿಲಿಯ ಟನ್ ಗುರಿಗೆ ಪ್ರತಿಯಾಗಿ ಎನ್‌ಎಂಪಿಟಿ ಶೇ.2.57ರಷ್ಟು ಹೆಚ್ಚುವರಿ ಸರಕು ನಿರ್ವಹಣೆ ಮಾಡಿದೆ. ಕೆಐಒಸಿಎಲ್‌ನ ಕಬ್ಬಿಣದ ಅದಿರು, ಪಿಒಎಲ್ ಉತ್ಪನ್ನಗಳು, ಎಲ್‌ಪಿಜಿ, ಸಿಮೆಂಟ್, ಅಡುಗೆ ಎಣ್ಣೆ, ಕಾಫಿ ಮತ್ತು ಇತರ ಸರಕುಗಳ ನಿರ್ವಹಣೆಯಲ್ಲಿ ಹೆಚ್ಚಳವಾಗಿದೆ ಎಂದು ಎನ್‌ಎಂಪಿಟಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News