ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟಮಟ್ಟದ ಕಾರ್ಯಾಗಾರ

Update: 2018-04-04 17:32 GMT

ಮೂಡುಬಿದಿರೆ, ಎ. 4: ಮಿಜಾರಿನಲ್ಲಿರುವ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಎಂಬಿಎ ವಿಭಾಗ ಸಂಘಟಿಸಿದ ‘ ಭಾರತ ಮತ್ತು ಕರ್ನಾಟಕದಲ್ಲಿ ನಿಶ್ಚಿಂತ ವ್ಯಾಪಾರೋದ್ಯಮ’ ಎಂಬ ವಿಷಯ ಕುರಿತಾದ ಒಂದು ದನದ ರಾಷ್ಟ್ರಮಟ್ಟದ ಕಾರ್ಯಾಗಾರವು ಬುಧವಾರ ನಡೆಯಿತು.

ನಿಟ್ಟೆ ಎನ್‌ಎಂಎಎಂಐಟಿ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಂಕರ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಆಡಳಿತ ವ್ಯವಸ್ಥೆಯಲ್ಲಿನ ನಕಾರತ್ಮಕ ವಿಷಯಗಳು ವ್ಯಾಪರೋದ್ಯಮಕ್ಕೆ ತೊಡಕಾಗಿದೆ. ಲಂಚಾವತಾರ, ವ್ಯಾಪಾರ ಅಥವಾ ಉದ್ದಿಮೆ ಸ್ಥಾಪಿಸಲು ಬೇಕಾದ ಮೂಲ ಭೂತ ಅವಶ್ಯಕತೆಗಳ ಅಲಭ್ಯತೆಯಿಂದ ದೇಶದಲ್ಲಿ ವ್ಯಾಪಾರೋದ್ಯಮಗಳ ಸ್ಥಾಪನೆಯ ಹಿನ್ನಡೆಗೆ ಕಾರಣವಾಗಿದೆ. ಯುವ ಉದ್ಯಮಗಲ್ಲಿ ವ್ಯಾಪಾರವನ್ನು ಸ್ಥಾಪಿಸುವ ಬಗ್ಗೆ ಸರಿಯಾದ ಯೋಜನೆ ಮಾತ್ರವಲ್ಲ, ಯಾವ ಸ್ಥಳದಲ್ಲಿ ಯಾವ ಉದ್ದಿಮೆ ಸ್ಥಾಪಿಸಬೇಕು ಎನ್ನುವ ಚಿಂತನೆಯೂ ಮೂಖ್ಯವಾಗುತ್ತದೆ ಎಂದು ಹೇಳಿದರು. 

ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ ಆಳ್ವ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ನಿರುದ್ಯೋಗ ಎನ್ನುವ ವಿಚಾರವನ್ನು ರಾಜಕೀಯವಾಗಿ ಇಂದು ಹೆಚ್ಚು ಳಸಲಾಗುತ್ತಿದೆ. ಆದರೆ ಪ್ರತಿಯೊಬ್ಬರಲ್ಲಿ ಉದ್ಯಮ, ಉದ್ಯೋಗವನ್ನು ಸಋಷ್ಟಿಸುವಲ್ಲಿ ಸಕಾರತ್ಮಕ ಪ್ರೇರಣೆ ನೀಡಿದರೆ ನಿರುದ್ಯೋಗದ ವಿಚಾರ ಗೌಣವಾಗುತ್ತದೆ ಎಂದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್‌ಫೆರ್ನಾಂಡಿಸ್ ಮಾತನಾಡಿ, ದಿನಕ್ಕೆ 15 ಸೆಕುಂಡು ಮಾತ್ರ ನಿದ್ರೆ ಮಾಡುವ ಇರುವೆಯ ಕ್ರಿಯಾಶೀಲತೆ, ತನಗಿಂತ 20 ಪಟ್ಟು ಭಾರ ಹೊರುತ್ತ ಓಡಾಡುವ ಸಾಮರ್ಥ್ಯ ವ್ಯಾಪಾರೋದ್ಯಮಿಗಳಿಗೆ ಆದರ್ಶವಾಗಬೇಕಾಗಿದೆ; ಸೋಮಾರಿಗಳಿಗೆ ವ್ಯಾಪಾರೋದ್ಯಮ ಹಿಡಿಸುವುದಿಲ್ಲ’ ಎಂದರು.

ಕಾರ್ಯಾಗಾರದ ಮುಖ್ಯ ಸಂಘಟಕ ಮತ್ತು ಎಂಬಿಎ ವಿಭಾಗದ ಡೀನ್ ಪ್ರೊ.ಪಿ. ರಾಮಕೃಷ್ಣ ಚಡಗ ಸ್ವಾಗತಿಸಿ, ಸಂಯೋಜಕ , ಪ್ರೊ.ಡಾ ಜಿ.ವಿ. ಜೋಶಿ ಪ್ರಸ್ತಾವನೆಗೈದರು. ಸಹಾಯಕ ಪ್ರೊಫೆಸರ್ ಗುರುದತ್ ಸೋಮಯಾಜಿ ನಿರೂಪಿಸಿದರು. ಡಾ.ನಾಗೇಂದ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News