ಈ ಬಾರಿ ಅಭಿವೃದ್ಧಿ, ಅಪಪ್ರಚಾರದ ನಡುವೆ ಚುನಾವಣೆ : ಹರೀಶ್ ಕುಮಾರ್

Update: 2018-04-05 06:08 GMT

ಪುತ್ತೂರು, ಎ.4: ಈ ಬಾರಿಯ ವಿಧಾನಸಭಾ ಚುನಾವಣೆ ನಮ್ಮ ಪಕ್ಷದ ಅಭಿವೃದ್ಧಿ ಹಾಗೂ ಬಿಜೆಪಿ ಪಕ್ಷದ ಅಪಪ್ರಚಾರಗಳ ನಡುವೆ ನಡೆಯುವ ಚುನಾವಣೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳು ಹಾಗೂ ಸರಕಾರದ ಸಾಧನೆಗಳು ಕಾಂಗ್ರೆಸ್ ಪಕ್ಷಕ್ಕೆ ಶ್ರೀರಕ್ಷೆಯಾಗಲಿದೆ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ 8ರಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್‌ಕುಮಾರ್ ಹೇಳಿದರು. ಪುತ್ತೂರಿನಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ದಾಖಲೆಯ ಅಭಿವೃದ್ಧಿ ಕೆಲಸಗಳು ನಡೆದಿದೆ. ಸಂಪರ್ಕ ರಸ್ತೆ-ಸಂಪರ್ಕ ಸೇತುವೆಗಳ ಅಭಿವೃದ್ಧಿ ಕೆಲಸಗಳು ಗಣನೀಯ ಪ್ರಮಾಣದಲ್ಲಿ ನಡೆದಿದೆ. ಅನೇಕ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸಲಾಗಿದೆ. 

ಚುನಾವಣಾ ಪ್ರಣಾ ಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಈಡೇರಿಸಿದೆ. ಅನ್ನಭಾಗ್ಯ ದಿಂದ ಹಿಡಿದು ಅನಿಲಭಾಗ್ಯದವರೆಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರಣಾಳಿಕೆಯಲ್ಲಿ ನೀಡಲಾದ ಆಶ್ವಾಸನೆಗಳಲ್ಲದೆ ಸಾಲಮನ್ನಾ, ಹೈನುಗಾರರಿಗೆ ಲೀಟರೊಂದಕ್ಕೆ 5ರೂ. ಸಬ್ಸಿಡಿ, ಇಂದಿರಾ ಕ್ಯಾಂಟೀನ್ ಮೊದಲಾದ ಹತ್ತು ಹಲವು ಯೋಜನೆಗಳೊಂದಿಗೆ ಕರ್ನಾಟಕವನ್ನು ಹಸಿವು ಮುಕ್ತ-ಋಣಮುಕ್ತ ರಾಜ್ಯವನ್ನಾಗಿಸುವ ಕೆಲಸ ಸಿದ್ದರಾಮಯ್ಯ ಅವರಿಂದ ನಡೆದಿದೆ ಎಂದರು.

ರಾಜ್ಯ ಸರಕಾರದ ಸಾಧನೆಗಳು ಜನರಿಗೆ ತೃಪ್ತಿ ನೀಡಿದ್ದು, ರಾಜ್ಯದ ಎಲ್ಲಿಯೂ ಅಧಿಕಾರ ವಿರೋಧಿ ಅಲೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ದೊಡ್ಡ ಅಂತರದ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯಲ್ಲಿ ಅಭ್ಯರ್ಥಿ ವಿಚಾರದಲ್ಲಿ ಗೊಂದಲವಿಲ್ಲ. ಎಲ್ಲರೂ ಪ್ರಬಲರೇ ಆಗಿದ್ದು, ಈ ಬಾರಿ ಎಲ್ಲರೂ ಗೆಲವು ಸಾಧಿಸಲಿದ್ದಾರೆ ಎಂದು ಹರೀಶ್ ಕುಮಾರ್ ತಿಳಿಸಿದರು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಸರ ಕಾರವನ್ನು ಅಪಪ್ರಚಾರಗಳ ಮೂಲಕ ಸೋಲಿಸುವ ಕೆಲಸ ನಡೆ ದಿದ್ದು, ಅಪಪ್ರಚಾರದಿಂದಾಗಿಯೇ ಸೋಲಾಗಿದೆ. ಆದರೆ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ.

ವಿದೇಶದಿಂದ ಕಪ್ಪು ಹಣ ತರಿಸಿ ಪ್ರತಿಯೊಬ್ಬರಿಗೂ 15 ಲಕ್ಷರೂ.ನಂತೆ ಹಂಚುತ್ತೇವೆ. ಬ್ಯಾಂಕ್ ಖಾತೆ ತೆರೆದು 5 ಸಾವಿರ ರೂ. ಹಾಕುತ್ತೇವೆ. 2 ಕೋಟಿ ಉದ್ಯೋಗಿ ಸೃಷ್ಟಿಸಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತೇವೆ ಎಂದು ನೀಡಿದ ಭರವಸೆಗಳೆಲ್ಲಾ ಸುಳ್ಳಾ ಗಿದೆ ಎಂದರು. ನೋಟು ಅಮಾನ್ಯ ಮಾಡಿದ ಪರಿಣಾಮವಾಗಿ ಬಹುತೇಕ ಕಂಪೆನಿಗಳು ಮುಚ್ಚಿವಂತಾಗಿದ್ದು, ಇದರಿಂದಾಗಿ ಹಲವು ಮಂದಿ ಉದ್ಯೋಗವನ್ನೂ ಕಳಕೊಳ್ಳುವಂತಾಗಿದೆ. ಪ್ರಪಂಚದ ಯಾವುದೇ ದೇಶದಲ್ಲಿಲ್ಲದಷ್ಟು ಶೇ.28ರಷ್ಟು ಜಿಎಸ್‌ಟಿ ಜಾರಿಗೆ ತಂದು ಉದ್ಯಮಿಗಳಿಗೆ, ಕೃಷಿಕರಿಗೆ ಹಾಗೂ ಜನತೆಗೆ ತೊಂದರೆ ನೀಡಿದ್ದಾರೆ. ದೇಶದ ಇತಿಹಾಸದಲ್ಲೇ ಆಗದಷ್ಟು ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದು, ದಿನಬಳಕೆಯ ವಸ್ತುಗಳ ಬೆಲೆಯನ್ನು ಏರಿಸಿದ್ದಾರೆ. ಅಲ್ಲದೆ ಅಡಿಕೆ, ತೆಂಗು, ಕಾಳುಮೆಣಸು ಸೇರಿದಂತೆ ಕೃಷಿ ಉತ್ಪನ್ನಗಳ ಬೆಳೆ ಇಳಿಯುವಂತೆ ಮಾಡಿದ್ದು ಕೆಂದ್ರ ಬಿಜೆಪಿ ಸರಕಾರದ ಸಾಧನೆಯಾಗಿದೆ ಎಂದು ಅವರು ಟೀಕಿಸಿದರು.

ಕೇಂದ್ರ ಸರಕಾರ ರೈತ ವಿರೋಧಿ, ಜನ ವಿರೋಧಿಯಾಗಿದೆ. ಸಂವಿಧಾನ ವಿರೋಧಿ-ದೇಶವಿರೋಧಿ ಹೇಳಿಕೆಗಳನ್ನು ಕೇಂದ್ರದ ಸಚಿವರುಗಳೇ ನೀಡುತ್ತಿದ್ದು, ದಲಿತರನ್ನು ಧಮನಿಸುವ ಕೆಲಸಕ್ಕೆ ಕೇಂದ್ರ ಸರಕಾರ ಇಳಿದಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದರು. ಈ ಹಿಂದೆ ಅಡಿಕೆ ಬೆಳೆಗಾರರ ಪರವಾಗಿ ಮಂಗಳೂರು ತನಕ ಪಾದೆಯಾತ್ರೆ ಮಾಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮತ್ತು ಜಿಲ್ಲೆಯ ನಂಬರ್ ಒನ್ ಸಂಸದರು ಈಗ ಏನು ಮಾಡುತ್ತಿದ್ದಾರೆ. ಜಿಲ್ಲೆಗೆ ಅವರ ಕೊಡುಗೆ ಏನು ಎಂಬುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ನಮ್ಮಲ್ಲಿ ಅಭ್ಯರ್ಥಿ ವಿಚಾರದಲ್ಲಿ ಗೊಂದಲವಿಲ್ಲ, ಆದರೆ ಬಿಜೆಪಿಗರಿಗೆ ಇನ್ನೂ ಅಭ್ಯರ್ಥಿಗಳನ್ನು ಗುರುತಿಸಲು ಆಗಿಲ್ಲ, ಪಕ್ಷದ ಚಿಹ್ನೆಗೆ ಓಟು ಕೊಡಿ ಎಂದು ಕೇಳುವ ಪರಿಸ್ಥಿತಿಯಲ್ಲಿ ಅವರಿದ್ದಾರೆ ಎಂದು ಅವರು ಟೀಕಿಸಿದರು.

ಸುಳ್ಯದಲ್ಲಿ ಡಾ.ರಘು ಈ ಹಿಂದೆ ಮೂರು ಬಾರಿ ಸೋಲು ಕಂಡಿದ್ದರೂ ಅಲ್ಲಿನ ಕಾರ್ಯಕರ್ತರಿಗೆ ಅವರನ್ನು ಗೆಲ್ಲಿಸಬೇಕೆಂಬ ಹಠ ವಿದೆ. ಡಾ.ರಘು ಸೋಲು ಅನುಭವಿಸಿದ್ದರೂ ಹಳ್ಳಿ ಹಳ್ಳಿಗೆ ಹೋಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಅವರೇ ಮತ್ತೆ ಅಭ್ಯರ್ಥಿ ಯಾಗಬೇಕೆಂದು ಅಲ್ಲಿನ ಕಾರ್ಯಕರ್ತರು ಬಯಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಪಕ್ಷದ ವಕ್ತಾರ ದುರ್ಗಾಪ್ರಸಾದ್ ರೈ ಕುಂಬ್ರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ, ಪಕ್ಷದ ಪ್ರಮುಖರಾದ ಸಂತೋಷ್ ಭಂಡಾರಿ ಚಿಲ್ಮೆತ್ತಾರು ಮತ್ತು ಬಾತಿಷಾ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರಿನ 24X7 ಕಾರ್ಯಚಟು ವಟಿಕೆಯ ಶಾಸಕಿ ಶಕುಂತಳಾ ಶೆಟ್ಟಿ ಯವರು ಕ್ಷೇತ್ರಕ್ಕೆ 1 ಸಾವಿರ ಕೋ.ರೂ.ಗೂ ಅಧಿಕ ಅನುದಾನ ತರಿಸಿಕೊಂಡು ಸರ್ವತೋಮುಖ ಅಭಿವೃದ್ಧಿಯ ಕೆಲಸ ಮಾಡಿದ್ದಾರೆ. ಅವರದ್ದು ಅಭಿವೃದ್ಧಿಯ ಮಂತ್ರವಾಗಿದ್ದು, ಅಭಿವೃದ್ಧಿ ಕೆಲಸದ ಮೂಲಕ ಜನಪ್ರಿಯತೆ ಗಳಿಸಿರುವ ಶಕುಂತಳಾ ಶೆಟ್ಟಿ ಮುಂದಿನ ಚುನಾವಣೆಯಲ್ಲೂ ಗೆಲುವು ಸಾಧಿ ಸಲಿದ್ದಾರೆ. ಜಿಲ್ಲೆಯಲ್ಲಿ ಹಾಲಿ ಶಾಸಕರ ಬದಲಾವಣೆ ಇರದು ಎಂಬುದು ನಮ್ಮ ಭಾವನೆ.

ಹರೀಶ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News