ಐಪಿಎಲ್ ಹಿಟ್ಸ್: ಇಲ್ಲಿದೆ ಅತ್ಯಂತ ವೇಗದ ಶತಕಗಳ ಸರದಾರರ ಪಟ್ಟಿ
ಐಪಿಎಲ್ ಸುಗ್ಗಿ ಆರಂಭಗೊಳ್ಳಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ವಿಶ್ವಾದ್ಯಂತ ಜನರು ಕುತೂಹಲದಿಂದ ಕಾಯುತ್ತಿರುವ ಈ ಕ್ರಿಕೆಟ್ ಟೂರ್ನಿ ಹಲವು ದಾಖಲೆಗಳಿಂದಲೇ ವಿಶಿಷ್ಟವೆನಿಸುವುದು. ಹೊಡಿಬಡಿಯ ಈ ಟೂರ್ನಿಯಲ್ಲಿ ಸಿಕ್ಸರ್, ಬೌಂಡರಿಗಳದ್ದೇ ಕಾರುಬಾರು. ಇದುವರೆಗಿನ ಐಪಿಎಲ್ ಸೀಸನ್ ಗಳಲ್ಲಿ ಅತೀ ವೇಗದ ಶತಕ ಸಿಡಿಸಿದವರ ಪಟ್ಟಿ ಈ ಕೆಳಗಿದೆ.
ಸೀಸನ್ ಪ್ರಕಾರ
2008 ಆ್ಯಡಮ್ ಗಿಲ್ ಕ್ರಿಸ್ಟ್ (ಡೆಕ್ಕನ್ ಚಾಲೆಂಜರ್ಸ್) 42 ಬಾಲ್ ಗಳು
2009 ಎಬಿಡಿ ವಿಲಿಯರ್ಸ್ (ಡೆಲ್ಲಿ ಡೇರ್ ಡೆವಿಲ್ಸ್ ) 51 ಬಾಲ್ ಗಳು
2010 ಯೂಸುಫ್ ಪಠಾಣ್ (ರಾಜಸ್ಥಾನ ರಾಯಲ್ಸ್) 37 ಬಾಲ್ ಗಳು
2011 ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) 46 ಬಾಲ್ ಗಳು
2012 ಮುರಳಿ ವಿಜಯ್ (ಚೆನ್ನೈ ಸೂಪರ್ ಕಿಂಗ್ಸ್) 51 ಬಾಲ್ ಗಳು
2013 ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) 30 ಬಾಲ್ ಗಳು
2014 ವೃದ್ಧಿಮಾನ್ ಸಹಾ (ಕಿಂಗ್ಸ್ X1 ಪಂಜಾಬ್) 49 ಬಾಲ್ ಗಳು
2015 ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) 46 ಬಾಲ್ ಗಳು
2016 ಎಬಿಡಿ ವಿಲಿಯರ್ಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) 43 ಬಾಲ್ ಗಳು
2017 ಡೇವಿಡ್ ವಾರ್ನರ್ (ಸನ್ ರೈಸರ್ಸ್ ಹೈದರಾಬಾದ್) 43 ಬಾಲ್ ಗಳು