ಎಸೆಸೆಲ್ಸಿ /ಪಿಯುಸಿ ನಂತರ ಮುಂದೇನು?: ಎ.11ರಂದು ಮಾರ್ಗದರ್ಶನ ಶಿಬಿರ

Update: 2018-04-09 07:53 GMT

ಮಂಗಳೂರು, ಎ.9: ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಮತ್ತವರ ಪಾಲಕರಿಗೆ 'ಎಸೆಸೆಲ್ಸಿ /ಪಿಯುಸಿ ನಂತರ ಮುಂದೇನು?’ ಮಾರ್ಗದರ್ಶನ ಶಿಬಿರವು ಎ.11ರಂದು ಸಂಜೆ 4ಕ್ಕೆ ನಗರದ ಸ್ಟೇಟ್ ಬ್ಯಾಂಕ್ ಬಳಿಯ (ನೆಲ್ಲಿಕಾಯಿ ರಸ್ತೆ) ಅಲ್ ರಹಬಾ ಪ್ಲಾಝಾದ 2ನೇ ಮಹಡಿಯಲ್ಲಿರುವ ದಿ ಕ್ಯಾಂಪಸ್ ಕರಿಯರ್ ಅಕಾಡಮಿಯಲ್ಲಿ ನಡೆಯಲಿದೆ. 

ಕರಿಯರ್ ಗೈಡೆನ್ಸ್ ಆ್ಯಂಡ್ ಇನ್ಫಾರ್ಮೇಶನ್ ಸೆಂಟರ್ ಹಮ್ಮಿಕೊಂಡಿರುವ ಈ ಶಿಬಿರದಲ್ಲಿ ಕರಿಯರ್ ಅಂದರೇನು?, ಕರಿಯರ್ ಗೈಡೆನ್ಸ್ ನ ಅವಶ್ಯಕತೆ ಯಾಕೆ?, ಕರಿಯರ್ ಪ್ಲಾನಿಂಗ್ ಯಾವಾಗ ಮಾಡಿಕೊಳ್ಳಬೇಕು?, ಕರಿಯರ್ ಪ್ಲಾನಿಂಗ್‍ನ ಹಂತ/ವಿಧಾನಗಳೇನು? ಹಾಗೂ ಎಸೆಸೆಲ್ಸಿ/ಪಿಯುಸಿ ಬಳಿಕ ಕಲಿಕೆಗಿರುವ ಅವಕಾಶಗಳೇನು? ಎಂಬಿತ್ಯಾದಿ ಪ್ರಮುಖ ವಿಷಯಗಳ ಮಾಹಿತಿ, ಮಾರ್ಗದರ್ಶನ ಸಿಗಲಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರ ಗೊಂದಲ ಮತ್ತು  ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ.

ಶಿಬಿರಕ್ಕೆ ಪ್ರವೇಶ ಉಚಿತವಾಗಿದ್ದು, ಆಸಕ್ತರು ಮೊ.ಸಂ.: 9845054191ಗೆ ಕರೆಮಾಡಿ ಹೆಸರು ನೋಂದಾಯಿಸಬಹುದೆಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಉಮರ್ ಯು. ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News