ಐಪಿಎಲ್ 2018: ಹೈದರಾಬಾದ್ ಗೆಲುವಿಗೆ 126 ರನ್ ಗುರಿ

Update: 2018-04-09 16:15 GMT

ಹೈದರಾಬಾದ್, ಎ.9: ಐಪಿಎಲ್ ಟ್ವೆಂಟಿ-20 ಟೂರ್ನಿಯ 4ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿಗೆ 126 ರನ್ ಗುರಿ ನೀಡಿತು.

 ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 125 ರನ್ ಗಳಿಸಿತು. ರಾಜಸ್ಥಾನ ಪರ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್(49,42 ಎಸೆತ, 5 ಬೌಂಡರಿ) ಏಕಾಂಗಿ ಹೋರಾಟ ನೀಡಿದರು. ನಾಯಕ ಅಜಿಂಕ್ಯ ರಹಾನೆಯೊಂದಿಗೆ 2ನೇ ವಿಕೆಟ್‌ಗೆ 46 ರನ್ ಜೊತೆಯಾಟ ನಡೆಸಿದರು.

ಹೈದರಾಬಾದ್ ಪರ ಶಾಕಿಬ್ ಅಲ್ ಹಸನ್(2-23)ಸಿದ್ದಾರ್ಥ್ ಕೌಲ್(2-14) ತಲಾ ಎರಡು ವಿಕೆಟ್ ಹಾಗೂ ರಶೀದ್ ಖಾನ್(1-23), ಭುವನೇಶ್ವರ ಕುಮಾರ್(1-30) ಹಾಗೂ ಸ್ಟಾನ್‌ಲೇಕ್(1-29) ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News