×
Ad

ಬಿಜೆಪಿ ಆದಾಯದಲ್ಲಿ ಶೇ.81ರಷ್ಟು ಏರಿಕೆ, ಕಾಂಗ್ರೆಸ್ ಆದಾಯದಲ್ಲಿ ಕುಸಿತ

Update: 2018-04-10 19:24 IST

ಹೊಸದಿಲ್ಲಿ, ಎ.10: ಕಾಂಗ್ರೆಸ್ ಪಕ್ಷದ  ಆದಾಯ 2015-16 ಹಾಗೂ 2016-17 ನಡುವೆ ಶೇ.14ರಷ್ಟು ಇಳಿಕೆಯಾಗಿ 225.36 ಕೋಟಿ ರೂ.ಗಳಷ್ಟಾಗಿದ್ದರೆ ಇದೇ ಅವಧಿಯಲ್ಲಿ ಬಿಜೆಪಿಯ ಆದಾಯ ಶೇ 81.18ರಷ್ಟು ಏರಿಕೆಯಾಗಿ 1,034.27 ಕೋಟಿ ರೂ. ತಲುಪಿದೆ ಎಂದು ಮಂಗಳವಾರ ಬಿಡುಗಡೆಯಾದ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ.

ಬಿಜೆಪಿಯ ಆದಾಯ ಈ 2015-16ರಲ್ಲಿ 570.86 ಕೋಟಿ ರೂ. ಇದ್ದರೆ, ಕಾಂಗ್ರೆಸ್ ಆದಾಯ 261.56 ಕೋಟಿ ರೂ.ಗಳಾಗಿತ್ತೆಂದು ವರದಿಯಲ್ಲಿ ತಿಳಿಸಲಾಗಿದೆ. ಬಿಜೆಪಿ, ಕಾಂಗ್ರೆಸ್, ಬಹುಜನ್ ಸಮಾಜ ಪಕ್ಷ, ಎನ್‍ಸಿಪಿ, ಸಿಪಿಎಂ, ಸಿಪಿಐ ಹಾಗೂ ಟಿಎಂಸಿ ಇವುಗಳು ಒಟ್ಟು 1,559.17 ಕೋಟಿ ರೂ. ಆದಾಯ ಘೋಷಿಸಿದ್ದರೆ, 1,228.26 ಕೋಟಿ ರೂ. ವ್ಯಯಿಸಿದ್ದಾಗಿಯೂ ಹೇಳಿಕೊಂಡಿವೆ. ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯಾಧಾರದಲ್ಲಿ ವರದಿ ತಯಾರಿಸಲಾಗಿದೆ.

ಬಿಜೆಪಿಯು 2016-17ರಲ್ಲಿ 710.57 ಕೋಟಿ ರೂ. ವ್ಯಯಿಸಿದ್ದಾಗಿ ತಿಳಿಸಿದ್ದರೆ, ಕಾಂಗ್ರೆಸ್ ಪಕ್ಷ 321.66 ಕೋಟಿ ರೂ. ಅಂದರೆ ಅದರ ಆದಾಯಕ್ಕಿಂತ 96.30 ಕೋಟಿ ರೂ. ಹೆಚ್ಚು ವ್ಯಯಿಸಿತ್ತು. ದೇಣಿಗೆಗಳು ಹಾಗೂ ಧನಸಹಾಯವೇ ತಮ್ಮ ಆದಾಯದ ಮುಖ್ಯ ಮೂಲಗಳಾಗಿವೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಹೇಳಿಕೊಂಡಿವೆ. ಬಿಜೆಪಿ  2016-17ರಲ್ಲಿ ರೂ 997.12 ಕೋಟಿ ದೇಣಿಗೆ ಪಡೆದಿದೆ ಎಂದು ಘೋಷಿಸಿಕೊಂಡಿದ್ದರೆ ಕಾಂಗ್ರೆಸ್ ಪಕ್ಷ ರೂ 115.644 ಕೋಟಿ ದೇಣಿಗೆ ಪಡೆದಿತ್ತು.

2016-17ರಲ್ಲಿ ಒಟ್ಟು ಏಳು ರಾಷ್ಟ್ರೀಯ ಪಕ್ಷಗಳು ಸ್ವಯಂಪ್ರೇರಿತ ಧನಸಹಾಯದಿಂದ ರೂ 1,169.07 ಕೋಟಿ ಪಡೆದಿದ್ದವು ಎಂದು ವರದಿ ಹೇಳಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News