ಭಯೋತ್ಪಾದನೆಯ ಹಾದಿ ಹಿಡಿದ ಪುತ್ರನನ್ನು ತೊರೆದ ತಾಯಿ

Update: 2018-04-10 14:08 GMT

ಅಸ್ಸಾಂ, ಎ.10: ಭಯೋತ್ಪಾದನೆಯ ಹಾದಿಹಿಡಿದ ಪುತ್ರನನ್ನು ತೊರೆದಿರುವ ತಾಯಿಯೊಬ್ಬರು “ನನಗೆ ಮಗನಿಗಿಂತಲೂ ತಾಯ್ನಾಡು ಮುಖ್ಯ” ಎಂದು ಹೇಳಿದ್ದಾರೆ.

ಅಸ್ಸಾಂನ ನಾಗೌನ್ ನ ತಾಹಿರಾ ಬೇಗಂ ಅವರ ಪುತ್ರ ಖಮರುಲ್ ಝಮಾನ್ ಹಿಝ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗೆ ಸೇರಿದ್ದಾನೆ, ಎನ್ನಲಾಗಿದೆ.  ಸಾಮಾಜಿಕ ಜಾಲತಾಣದಲ್ಲಿ ಖಮರುಲ್ ರೈಫಲನ್ನು ಹಿಡಿದ ಫೋಟೊ ವೈರಲ್ ಆದ ನಂತರ ಆತ ಭಯೋತ್ಪಾದಕ ಸಂಘಟನೆ ಸೇರಿದ್ದಾನೆ ಎನ್ನಲಾಗಿತ್ತು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ತಾಹಿರಾ ಬಾನು, “ಆತ ಹಿಝ್ಬುಲ್ ಮುಜಾಹಿದೀನ್ ಸಂಘಟನೆಗೆ ಸೇರಿದ್ದರೆ ಸರಕಾರ ಆತನ ವಿರುದ್ಧ ಏನು ಬೇಕೋ ಅದನ್ನು ಮಾಡಲಿ. ನಾನು ಅವನ ಹೆಣವನ್ನೂ ಸ್ವೀಕರಿಸುವುದಿಲ್ಲ. ನನಗೆ ದೇಶವೇ ಮುಖ್ಯ” ಎಂದು ಹೇಳಿದರು.

4 ವರ್ಷಗಳ ಕಾಲ ಅಮೆರಿಕದಲ್ಲಿದ್ದ ಖಮರುಲ್ ಜಮ್ಮು ಕಾಶ್ಮೀರಕ್ಕೆ ಸ್ಥಳಾಂತರಗೊಂಡಿದ್ದ. ತಾನು ಅಲ್ಲಿ ಉದ್ಯಮವೊಂದನ್ನು ನಡೆಸುತ್ತಿದ್ದೇನೆ ಎಂದು ಹೇಳಿದ್ದ. ಆದರೆ ಆತ ಇದ್ದಕ್ಕಿದ್ದಂತೆ ನಾಪತ್ತೆಯಾದಾಗ ಕುಟುಂಬಸ್ಥರು ನಾಪತ್ತೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News