ರಸೆಲ್ ಸಿಕ್ಸರ್ ಸುರಿಮಳೆ :ಕೆಕೆಆರ್ 202/6

Update: 2018-04-10 16:24 GMT
ರಸೆಲ್ ಔಟಾಗದೆ 36 ಎಸೆತಗಳಲ್ಲಿ 1 ಬೌಂಡರಿ 11 ಸಿಕ್ಸರ್ ನೆರವಿನಲ್ಲಿ 88 ರನ್,

 ಚೆನ್ನೈ, ಎ.10: ಐಪಿಎಲ್ ಟ್ವೆಂಟಿ-20 ಟೂರ್ನಿಯ 5ನೇ ಪಂದ್ಯದಲ್ಲಿ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್  ತಂಡಕ್ಕೆ  ಕೋಲ್ಕತಾ ನೈಟ್ ರೈಡರ್ಸ್‌ ತಂಡ ಆ್ಯಂಡ್ರೆ ರಸೆಲ್ ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಕಠಿಣ ಸವಾಲು ವಿಧಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತಾ ನೈಟ್ ರೈಡರ್ಸ್‌ ಪರ ರಸೆಲ್ ಅವರು ಸಿಕ್ಸರ್ ಸುರಿಮಳೆ ಸುರಿಸಿದರು.

10 ಓವರ್‌ಗಳಲ್ಲಿ 89ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಕೋಲ್ಕತಾ ತಂಡದ ಬ್ಯಾಟಿಂಗ್‌ನ್ನು ನಾಯಕ ದಿನೇಶ್ ಕಾರ್ತಿಕ್ (26)ಜೊತೆ ಮುನ್ನಡೆಸಿದ ರಸೆಲ್ ಅವರು 6ನೇ ವಿಕೆಟ್‌ಗೆ ಜೊತೆಯಾಟದಲ್ಲಿ 76 ರನ್ ಸೇರಿಸಿದರು. ರಸೆಲ್ ಅವರು ಔಟಾಗದೆ 36 ಎಸೆತಗಳಲ್ಲಿ 1 ಬೌಂಡರಿ 11 ಸಿಕ್ಸರ್ ನೆರವಿನಲ್ಲಿ 88 ರನ್ ಗಳಿಸಿದರು. ಅವರ ಬ್ಯಾಟಿಂಗ್ ನೆರವಿನಲ್ಲಿ ಕೋಲ್ಕತಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 202 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News