ಅಕ್ರಮ ವಲಸಿಗರ ಕುರಿತು ಬ್ರಿಟನ್‌ನೊಂದಿಗೆ ಒಡಂಬಡಿಕೆಗೆ ಸಂಪುಟದ ಸಮ್ಮತಿ

Update: 2018-04-11 14:32 GMT

ಹೊಸದಿಲ್ಲಿ,ಎ.11: ಅಕ್ರಮ ವಲಸಿಗರ ವಾಪಸಾತಿಯ ಕುರಿತು ಬ್ರಿಟನ್ ಮತ್ತು ಅಯರ್ಲಂಡ್ ಜೊತೆಗೆ ಒಪ್ಪಂದವೊಂದಕ್ಕೆ ಸಹಿ ಹಾಕಲು ಭಾರತವು ಸಜ್ಜಾಗಿದೆ. ಈ ಕುರಿತು ತಿಳುವಳಿಕೆ ಪತ್ರ(ಎಂಒಯು)ಕ್ಕೆ ಕೇಂದ್ರ ಸಂಪುಟವು ಬುಧವಾರ ಸಮ್ಮತಿಯನ್ನು ಸೂಚಿಸಿದೆ.

ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರಿಗೆ ವೀಸಾ ಮುಕ್ತ ಒಪ್ಪಂದಕ್ಕೆ ಮತ್ತು ಕಾನೂನುಬದ್ಧವಾಗಿ ಬ್ರಿಟನ್ನಿಗೆ ಪ್ರಯಾಣಿಸುವವರಿಗೆ ಅಲ್ಲಿಯ ವೀಸಾ ನಿಯಮಾವಳಿಗಳ ಉದಾರೀಕರಣಕ್ಕೆ ಎಂಒಯು ಅನುಕೂಲ ಕಲ್ಪಿಸಲಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಇನ್ನೊಂದು ದೇಶದಲ್ಲಿ ಅಕ್ರಮವಾಗಿ ವಾಸವಾಗಿರುವವರ ರಾಷ್ಟ್ರೀಯತೆಯನ್ನು ದೃಢಪಡಿಕೊಂಡ ಬಳಿಕ ತಾಯ್ನಾಡಿಗೆ ಅವರ ವಾಪಸಾತಿಗೂ ಅದು ಅವಕಾಶ ಕಲ್ಪಿಸಲಿದೆ.

ಕಾಮನ್‌ವೆಲ್ತ್ ಮುಖ್ಯಸ್ಥರ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರಿಲ್ ಮೂರನೇ ವಾರದಲ್ಲಿ ಲಂಡನ್‌ಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಆ ಸಂದರ್ಭದಲ್ಲಿ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News