×
Ad

ಕಪಿಲ್‌ಸಿಬಲ್ ಪುತ್ರನ ವಿರುದ್ಧದ ಪ್ರಕರಣ ವರ್ಗಾವಣೆಗೆ ದಿಲ್ಲಿ ಕೋರ್ಟ್ ನಕಾರ

Update: 2018-04-11 22:05 IST
ಪ್ರಶಾಂತ್ ಭೂಷಣ್

ಹೊಸದಿಲ್ಲಿ, ಎ.11: ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್‌ರ ಪುತ್ರ, ನ್ಯಾಯವಾದಿ ಅಮಿತ್ ಸಿಬಲ್ ವಿರುದ್ಧ ದಾಖಲಿಸಲಾಗಿರುವ ಮಾನಹಾನಿ ಮೊಕದ್ದಮೆಯನ್ನು, ಆ ಪ್ರಕರಣದ ಆಲಿಕೆಯನ್ನು ಈ ಹಿಂದೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂಬ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಮನವಿಯನ್ನು ದಿಲ್ಲಿ ಕೋರ್ಟ್ ಬುಧವಾರ ತಿರಸ್ಕರಿಸಿದೆ.

ಪ್ರಕರಣವನ್ನು ವರ್ಗಾಯಿಸುವ ಅಧಿಕಾರವ್ಯಾಪ್ತಿ ತನಗೆ ಇಲ್ಲದ ಕಾರಣ. ಪ್ರಶಾಂತ್ ಭೂಷಣ್ ಅವರ ಅರ್ಜಿಯನ್ನು ತಿರಸ್ಕರಿಸುತ್ತಿರುವುದಾಗಿ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಸಮರ್ ವಿಶಾಲ್ ತಿಳಿಸಿದರು.ಎಸಿಎಂಎಂ ನ್ಯಾಯಾಲಯವು ರಾಜಕಾರಣಿಗಳು ಒಳಗೊಂಡಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ನಡೆಸುವುದಕ್ಕಾಗಿಯೇ ಪ್ರತ್ಯೇಕವಾಗಿ ರಚನೆಯಾಗಿದೆ.

ಅಮಿತ್ ಸಿಬಲ್ ವಿರುದ್ಧದ ಮಾನನಷ್ಟ ಮೊಕದ್ದಮೆಯ ಪ್ರಕರಣದ ಆಲಿಕೆ ನಡೆಸುತ್ತಿದ್ದ ದಿಲ್ಲಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆನಂತರ ದಿಲ್ಲಿ ಹೈಕೋರ್ಟ್‌ನ ಆದೇಶದ ಮೇರೆಗೆ ಅದನ್ನು ವಿಶೇಷ ನಿಯೋಜಿತ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News