ಚಲಾವಣೆಯಲ್ಲಿದ್ದ 87.5 ಶೇ. ನೋಟುಗಳ ರದ್ದತಿ ಒಳ್ಳೆಯ ನಿರ್ಧಾರವಾಗಿರಲಿಲ್ಲ

Update: 2018-04-12 13:56 GMT

ನ್ಯೂಯಾರ್ಕ್, ಎ.12: ಚಲಾವಣೆಯಲ್ಲಿದ್ದ 87.5 ಶೇ. ನೋಟುಗಳ ರದ್ದತಿ ಒಳ್ಳೆಯ ನಿರ್ಧಾರವಾಗಿರಲಿಲ್ಲ ಹಾಗು ಅದರ ಅನುಷ್ಠಾನವು ಸರಿಯಾಗಿ ನಡೆದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಕೇಂಬ್ರಿಜ್ ನ ಹಾರ್ವರ್ಡ್ ಕೆನಡಿ ಸ್ಕೂಲ್ ನಲ್ಲಿ ಮಾತನಾಡಿದ ಅವರು, ನೋಟು ರದ್ಧತಿ ನಿರ್ಧಾರಕ್ಕೂ ಮುನ್ನ ಕೇಂದ್ರ ಸರಕಾರವು ಆರ್ ಬಿಐ ಜೊತೆಗೆ ಸಮಾಲೋಚನೆ ನಡೆಸಿಲ್ಲ ಎನ್ನುವ ಆರೋಪಗಳನ್ನು ಅವರು ಅಲ್ಲಗಳೆದರು. ಚಲಾವಣೆಯಲ್ಲಿದ್ದ 87.5 ಶೇ. ನೋಟುಗಳನ್ನು ನಿಷೇಧಿಸುವ ನಿರ್ಧಾರವು ಉತ್ತಮ ನಿರ್ಧಾರವಾಗಿರಲಿಲ್ಲ ಎಂದವರು ಹೇಳಿದರು.

“ನೋಟು ರದ್ದತಿ ನಿರ್ಧಾರದ ವಿಚಾರದಲ್ಲಿ ನನ್ನನ್ನು ಸಂಪರ್ಕಿಸಿಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ. ನಮ್ಮನ್ನು ಸಂಪರ್ಕಿಸಲಾಗಿತ್ತು ಹಾಗು ಅದು ಒಳ್ಳೆಯ ನಿರ್ಧಾರ ಎಂದು ನಾವು ಆಲೋಚಿಸಿರಲಿಲ್ಲ” ಎಂದವರು ಹೇಳಿದರು.

“87.5 ಶೇ.ದಷ್ಟಿರುವ ನೋಟುಗಳು ರದ್ದಾದಾಗ ಅಷ್ಟೇ ಪ್ರಮಾಣದ ನೋಟುಗಳನ್ನು ಸಿದ್ಧ ಮಾಡಿಟ್ಟುಕೊಂಡಿರಬೇಕು ಹಾಗು ಚಲಾವಣೆಗೆ ತರಬೇಕು ಎಂದು ಯಾವ ಅರ್ಥಶಾಸ್ತ್ರಜ್ಞ ಕೂಡ ಹೇಳಬಲ್ಲ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News