×
Ad

ಇಸ್ರೇಲ್ ದಾಳಿಯಲ್ಲಿ ಹಮಾಸ್ ಹೋರಾಟಗಾರ ಮೃತ್ಯು

Update: 2018-04-12 22:39 IST

ಗಾಝಾ ಸಿಟಿ, ಎ. 12: ಫೆಲೆಸ್ತೀನ್‌ನ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ಗುರುವಾರ ನಡೆಸಿದ ದಾಳಿಯಲ್ಲಿ ಹಮಾಸ್ ಸದಸ್ಯರೊಬ್ಬರು ಮೃತಪಟ್ಟಿದ್ದಾರೆ ಎಂದು ಗಾಝಾ ಪಟ್ಟಿಯ ಆರೋಗ್ಯ ಸಚಿವಾಲಯ ತಿಳಿಸಿದೆ.

ಗಾಝಾ ಸಿಟಿಯ ಪೂರ್ವದಲ್ಲಿರುವ ವೀಕ್ಷಣಾ ನೆಲೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ವೀಕ್ಷಣಾ ನೆಲೆಯ ಮೇಲೆ ಇಸ್ರೇಲ್ ಸೇನೆ ಗುರುವಾರ ಮುಂಜಾನೆ ದಾಳಿ ಮಾಡಿದೆ.

ಮಾರ್ಚ್ 30ರ ಬಳಿಕ ಇಸ್ರೇಲ್ ಸೈನಿಕರು ಕನಿಷ್ಠ 32 ಫೆಲೆಸ್ತೀನೀಯರನ್ನು ಗಾಝಾದಲ್ಲಿ ಹತ್ಯೆಗೈದಿದ್ದಾರೆ.

ಗಡಿಯಲ್ಲಿ ನಡೆದ ಬೃಹತ್ ಪ್ರತಿಭಟನೆಗಳ ವೇಳೆ ಈ ಪೈಕಿ ಹೆಚ್ಚಿನವರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News