×
Ad

ಸ್ಯಾಂಡ್ ವಿಚ್, ಚಿಪ್ಸ್ ಜೊತೆಗೆ ಬಿಜೆಪಿ ಶಾಸಕರ ‘ಸ್ವಾದಿಷ್ಟ ಉಪವಾಸ’!

Update: 2018-04-12 22:51 IST

ಪುಣೆ, ಎ.12: ವಿಪಕ್ಷಗಳಿಂದ ಕಲಾಪಕ್ಕೆ ಅಡ್ಡಿ ವಿರೋಧಿಸಿ ದೇಶಾದ್ಯಂತ ಇಂದು ಉಪವಾಸ ಧರಣಿ ನಡೆಸಿದ ಬಿಜೆಪಿ ತನ್ನ ಇಬ್ಬರು ಶಾಸಕರಿಂದಾಗಿ ಮುಜುಗರಕ್ಕೀಡಾಗಿದೆ. ಇಂದು ಉಪವಾಸ ಧರಣಿ ನಡೆಯುತ್ತಿದ್ದ ಸಂದರ್ಭ ಮಹಾರಾಷ್ಟ್ರದ ಶಾಸಕರಾದ ಭೀಮ್ ರಾವ್ ತಾಪ್ಕಿರ್ ಹಾಗು ಸಂಜಯ್ ಭೇಗಡೆ ಸ್ಯಾಂಡ್ ವಿಚ್ ಹಾಗು ಚಿಪ್ಸ್ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುಣೆ ಕೌನ್ಸಿಲ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಅಧಿಕೃತ ಸಭೆಯಲ್ಲಿ ಸ್ಯಾಂಡ್ ವಿಚ್ ಮತ್ತು ಚಿಪ್ಸ್ ತಿಂದ ಇಬ್ಬರು ಶಾಸಕರು ಕ್ಯಾಮರಾಗೆ ಸಿಕ್ಕಿ ಬಿದ್ದಿದ್ದಾರೆ. ಇದರಿಂದಾಗಿ ರಾಷ್ಟ್ರ ಬಿಜೆಪಿ ನಾಯಕರಿಗೂ ಮುಜುಗರವಾಗಿದೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚವಾಣ್,”ಉಪವಾಸದ ನಾಟಕ ಇನ್ನು ಮುಂದೆ ನಡೆಯುವುದಿಲ್ಲ. ಸರಕಾರದ ಸುಳ್ಳು ಭರವಸೆಗಳ ಮೇಲೆ ಜನರಿಗೆ ಆಸಕ್ತಿಯಿಲ್ಲ” ಎಂದಿದ್ದಾರೆ

“ಉಪವಾಸಕ್ಕಿಂತ ಮೂರು ಗಂಟೆಗಳ ಮೊದಲು ಯಾರಾದರೂ ಆಹಾರ ಸೇವಿಸಿದರೆ ಬಿಜೆಪಿಯವರಿಗೆ ಅದು ಆಕ್ಷೇಪಾರ್ಹವಾಗಿ ಕಾಣಿಸುತ್ತದೆ. ಆದರೆ ಉಪವಾಸವಿದ್ದಾಗಲೇ ತಿನ್ನುವುದು ಅವರಿಗೆ ಸರಿ ಕಾಣಿಸುತ್ತದೆ. ಇಂದಿನ ಉಪವಾಸದ ಹಿಂದಿನ ಕಾರಣವೇ ಬೋಗಸ್” ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News