×
Ad

ಐಆರ್‌ಎನ್‌ಎಸ್‌ಎಸ್-1ಐ ಯಶಸ್ವಿ ಉಡಾವಣೆ

Update: 2018-04-12 22:53 IST

ಭಾರತ್‌ಪುರ, ಎ. 12: ಇಸ್ರೋ ಗುರುವಾರ ಬೆಳಗ್ಗೆ ಐಆರ್‌ಎನ್‌ಎಸ್‌ಎಸ್ 1ಐ ಪಥದರ್ಶಕ ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಧ್ರುವೀಯ ಉಪಗ್ರಹ ಉಡಾವಕದಿಂದ (ಪಿಎಸ್‌ಎಲ್‌ವಿ) ಉಡಾಯಿಸಲಾಯಿತು.

ಐಆರ್‌ಎನ್‌ಎಸ್‌ಎಸ್1ಎ ಈ ವರೆಗೆ ಮಾಡಲಾದ ಏಳು ಉಪಗ್ರಹಗಳ ಪೈಕೆ ಮೊದಲನೆಯದ್ದು. ರೂಬಿಡಿಯಂ ಪರಮಾಣು ಗಡಿಯಾರ ನಿಷ್ಕ್ರಿಯೆಗೊಂಡ ಕಾರಣ ಆ ಉಪಗ್ರಹ ಕಾರ್ಯ ನಿರ್ವಹಿಸಲು ವಿಫಲವಾಗಿದೆ. ಈಗ ಪರ್ಯಾಯ ಉಡಾವಣೆಯ ಎರಡನೇ ಉಪಗ್ರಹ ಯಶಸ್ವಿಯಾಗಿದೆ.

ಕಳೆದ ಆಗಸ್ಟ್‌ನಲ್ಲಿ ಉಡಾವಣೆ ಮಾಡಲಾಗಿದ್ದ ಮೊದಲ ಪರ್ಯಾಯ ಉಪಗ್ರಹ ಐಆರ್‌ಎನ್‌ಎಸ್‌ಎಸ್1ಎಚ್‌ನಿಂದ ಉಷ್ಣ ನಿರೋಧಕ ಕವಚ ಕಳಚಿಕೊಳ್ಳದ ಕಾರಣ ಉಡಾವಣೆ ವಿಫಲವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News