ಸ್ಪೈಸ್ ಜೆಟ್ ವಿಮಾನದಲ್ಲಿ ಹೊಗೆ
Update: 2018-04-12 23:18 IST
ಬೆಂಗಳೂರು , ಎ.12: ಕೊಯಂಬತ್ತೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನವು ಬೆಂಗಳೂರಿನಲ್ಲಿ ನೆಲಕ್ಕಿಳಿಯುವ ಸಂದರ್ಭ ವಿಮಾನದ ಎದುರಿನ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ಘಟನೆ ನಡೆದಿದೆ.
ಬೆಂಗಳೂರಿನ ನಿಲ್ದಾಣದಲ್ಲಿ ವಿಮಾನ ನೆಲಕ್ಕಿಳಿಯುವ ಸಂದರ್ಭ ಪೈಲಟ್ ಎದುರಿನ ಕ್ಯಾಬಿನ್‌ನಲ್ಲಿ ಹೊಗೆ ಏಳುತ್ತಿರುವುದನ್ನು ಗಮನಿಸಿದ್ದಾರೆ. ಪೈಲಟ್ ತುರ್ತು ಭೂಸ್ಪರ್ಷಕ್ಕೆ ಮನವಿ ಸಲ್ಲಿಸಿರಲಿಲ್ಲ. ಪ್ರಯಾಣಿಕರು ಸುರಕ್ಷಿತವಾಗಿ ವಿಮಾನದಿಂದ ಕೆಳಗೆ ಇಳಿದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.