ಕಥುವಾ ಪ್ರಕರಣ: ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ವತಿಯಿಂದ ಪ್ರತಿಭಟನೆ

Update: 2018-04-16 14:44 GMT

ಮಂಜನಾಡಿ, ಎ.16: ಜಮ್ಮುವಿನ ಕಥುವಾದಲ್ಲಿ 8ರ ಹರೆಯದ ಬಾಲಕಿ  ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಸಖಾಫಿಯವರು ಕಥುವಾ ಬಾಲಕಿಯ ಅತ್ಯಾಚಾರ ಮತ್ತು ಕೊಲೆಗೈದ ಆರೋಪಿಗಳ ರಕ್ಷಣೆಗೆ ಒಂದು ವಿಭಾಗ ರ್ಯಾಲಿ ಮಾಡಿದೆ ಎಂದರೆ ದೇಶದ ಪರಿಸ್ಥಿತಿ ಎತ್ತ ಕಡೆ ಸಾಗುತ್ತಿದೆ ಎಂದು ನಾವು ಚಿಂತಿಸಬೇಕಾಗಿದೆ, ಈ ಘಟನೆಯಿಂದ ಭಾರತವು ಇತರ ರಾಷ್ಟ್ರಗಳ ಮುಂದೆ ತಲೆ ತಗ್ಗಿಸುವಂತಾಗಿದೆ ಎಂದರು. ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿದಿಸಲು ಆಗ್ರಹಿಸಿದರು.

ಈ ಸಂದರ್ಭ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ, ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಉಪಾಧ್ಯಕ್ಷ ಮಸೂದ್ ಬಾ ಅಹ್ಸನಿ, ಪ್ರಧಾನ ಕಾರ್ಯದರ್ಶಿ ಮೊಯ್ದಿನ್ ಮೋರ್ಲ, ಶರೀಫ್ ಕಲ್ಕಟ್ಟ ,ಇಲ್ಯಾಸ್ ಪೊಟ್ಟೋಲಿಕೆ, ಶಬೀರ್ ಕೊಲ್ಲರಕೋಡಿ, ಅಮೀರ್ ಕೊಲ್ಲರಕೋಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News