ಕಥುವಾ ಪ್ರಕರಣ: ಕ್ರಮಕ್ಕೆ ಆಗ್ರಹಿಸಿ ಅಡ್ಡೂರಿನಲ್ಲಿ ಎಸ್ಸೆಸ್ಸೆಫ್ ನಿಂದ ಧರಣಿ

Update: 2018-04-16 18:02 GMT

ಅಡ್ಡೂರು,ಎ.16: ಕಥುವಾದ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ನಡೆಸಿರುವುದನ್ನು ಖಂಡಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಎಸ್ಸೆಸ್ಸೆಫ್ ಅಡ್ಡೂರು ಶಾಖೆ ವತಿಯಿಂದ ಇಲ್ಲಿನ ಮುಖ್ಯ ಜಂಕ್ಷನ್ ನಲ್ಲಿ ರವಿವಾರ ಧರಣಿ ನಡೆಸಲಾಯಿತು.

ಈ ವೇಳೆ ಶಾಫೀ ಮದನಿ ಕಂದಾವರ ಮಾತನಾಡಿ, ಇಲ್ಲಿನ ರಾಜಕಾರಣಿ, ನ್ಯಾಯ ಪಾಲಕ ಹಾಗೂ ಪೊಲೀಸರ ನಿರ್ಲಕ್ಷ್ಯದಿಂದ ದೇಶದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದರಿಂದ ಇಂತಹ ಅಮಾನವೀಯ ಘಟನೆಗಳು ಮರುಕಳಿಸುವಂತೆ ಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾಲಕಿಯ ಕುಟುಂಬಕ್ಕೆ ನ್ಯಾಯ ಸಮ್ಮತ ಪರಿಹಾರ ಒದಗಿಸಬೇಕು ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.

ಧರಣಿಯಲ್ಲಿ ಬದ್ರುದ್ದೀನ್ ಅಝ್ಹರಿ, ಎಸ್ಸೆಸ್ಸೆಫ್ ಕೈಕಂಬ ಸೆಕ್ಟರ್ ಅಧ್ಯಕ್ಷ ರಿಯಾಝ್ ಸಈದ್, ಎಸ್ಸೆಸ್ಸೆಫ್ ಅಡ್ಡೂರು ಶಾಖೆ ಅಧ್ಯಕ್ಷ ಉಬೈದುಲ್ಲಾ ಸಖಾಫಿ, ಇಹ್ಸಾನ್ ದಾಯಿ ಮಿನೀರ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.
ಶಹೀದ್ ಸ್ವಾಗತಿಸಿ, ಶಬೀರ್ ಕಾರ್ಯಕ್ರಮನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News