ವಿದೇಶ ಪ್ರಯಾಣಕ್ಕೆ ಸಲ್ಮಾನ್ ಖಾನ್‌ಗೆ ಅನುಮತಿ

Update: 2018-04-17 17:46 GMT

ಜೋಧಪುರ, ಎ. 17: ಕೃಷ್ಣಮೃಗ ಭೇಟೆಯ 1998ರ ಪ್ರಕರಣದಲ್ಲಿ ಜಾಮೀನಿನಲ್ಲಿ ಹೊರಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅಮೆರಿಕ, ಕೆನಡಾ ಹಾಗೂ ನೇಪಾಳಕ್ಕೆ ಪ್ರವಾಸ ತೆರಳಲು ಜೋಧಪುರ ನ್ಯಾಯಾಲಯ ಮಂಗಳವಾರ ಅನುಮತಿ ನೀಡಿದೆ.

 ಸಲ್ಮಾನ್ ಖಾನ್ ಅವರು ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ಜೋಧ್ ಪುರ ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಚಂದ್ರ ಕುಮಾರ್ ಸೊಂಗಾರ ಅವರು ಈ ಅನುಮತಿ ನೀಡಿದ್ದಾರೆ. ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ತ್ಯಜಿಸುವಂತಿಲ್ಲ ಎಂದು ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ರವೀಂದ್ರ ಕುಮಾರ್ ಜೋಷಿ ಇತ್ತೀಚೆಗೆ ತೀರ್ಪು ನೀಡುವ ಸಂದರ್ಭ ಸಲ್ಮಾನ್ ಖಾನ್‌ಗೆ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News