ಪ್ರತಿಮೆಗಳಿಗೆ ಸಿಸಿಟಿವಿ ಕಣ್ಗಾವಲು: ಸಚಿವ ರಾಮ್ ದಾಸ್ ಅಠಾವಳೆ ಆಗ್ರಹ

Update: 2018-04-17 17:51 GMT

ಮುಂಬೈ, ಎ. 17: ದೇಶದಾದ್ಯಂತ ಹಲವು ಸ್ಥಳಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಹಾನಿ ಎಸಗಿದ ಪ್ರಕರಣಗಳ ಹಿನ್ನೆಲೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಖಾತೆಯ ಸಹಾಯಕ ಸಚಿವ ರಾಮದಾಸ್ ಅಠಾವಳೆ, ಅಂಬೇಡ್ಕರ್ ಹಾಗೂ ಇತರ ನಾಯಕರ ಪ್ರತಿಮೆಗಳಿಗೆ ಸಿಸಿಟಿವಿ ಕಣ್ಗಾವಲಿಗೆ ಆಗ್ರಹಿಸಿದ್ದಾರೆ.

 ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸಗೊಳಿಸಿದ ರತ್ನಗಿರಿ ಜಿಲ್ಲೆಯ ಖೇಡ್‌ಗೆ ಭೇಟಿ ನೀಡಿದ ಬಳಿಕ ಅವರು ಈ ಆಗ್ರಹ ವ್ಯಕ್ತಪಡಿಸಿದರು. ‘‘ದೇಶದ ಮಹಾನ್ ನಾಯಕರ ಪ್ರತಿಮೆಗಳಿಗೆ ಹಾನಿ ಎಸಗುವುದನ್ನು ನಾವು ಖಂಡಿಸುತ್ತೇವೆ. ಇಂತಹ ಅವಮಾನಕರ ಘಟನೆಗಳು ಸಂಭವಿಸುವುದನ್ನು ಸರಕಾರ ನಿಯಂತ್ರಿಸಬೇಕು. ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಸಿಸಿಟಿವಿ ಅಳವಡಿಸುವ ಮೂಲಕ ಇಂತಹ ಘಟನೆಗಳನ್ನು ತಡೆಯಬಹುದು’’ ಎಂದು ಅವರು ಹೇಳಿದ್ದಾರೆ. ಖೇಡ್ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವಂತೆ ಹಾಗೂ ಅಪರಾಧಿಗಳನ್ನು ಕೂಡಲೇ ಬಂಧಿಸುವಂತೆ ಕೂಡ ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News