ಎ.27: ಮಂಚಿ ಸುನ್ನೀ ಮಹಲ್ ನೂತನ ಮಸೀದಿ ಉದ್ಘಾಟನೆ

Update: 2018-04-21 09:07 GMT

ಬಂಟ್ವಾಳ, ಎ. 21: ಸುನ್ನೀ ಮಹಲ್ ತಾಜುಲ್ ಉಲಮಾ ನಗರ ಮಂಚಿಯ ಕಯ್ಯೂರಿನಲ್ಲಿ ನಿರ್ಮಾಣಗೊಂಡಿರುವ ನೂತನ ಮಸೀದಿಯ ಉದ್ಘಾಟನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಎ. 25ರಿಂದ 27ರವರೆಗೆ ಮಂಚಿ ಮಸೀದಿ ವಠಾರದಲ್ಲಿ ನಡೆಯಲಿದೆ.

ಎ.25ರಂದು ಸೈಯದ್ ಯು.ಪಿ.ಎಸ್. ಖಾಸಿಂ ತಂಙಳ್ ಧ್ವಜಾರೋಹಣ ಮಾಡುವರು. ಅಂದು ಬೆಳಿಗ್ಗೆ 10ಕ್ಕೆ ಮುಹಮ್ಮದ್ ಅಲಿ ಫೈಝಿ ಅವರಿಂದ ಮಹಿಳಾ ತರಗತಿ ನಡೆಯಲಿದೆ. 26ರಂದು ಮಗ್ರಿಬ್ ನಮಾರ್ ಬಳಿಕ ಸಯಯದ್ ಶಿಹಾಬುದ್ದೀನ್ ತಂಙಳ್ ತಲೆಕ್ಕಿ ಅವರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಲಿದೆ.

ಎ.27ರಂದು ಬೆಳಗ್ಗೆ 10ಕ್ಕೆ ಜಿಲ್ಲೆಯ ಸಂಯುಕ್ತ ಝಾಝಿ ಸೈಯದ್ ಕೂರತ್ ತಂಙಳ್ ಅವರು ನೂತನ ಮಸೀದಿಯನ್ನು ಉದ್ಘಾಟಿಸುವರು ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಸಿ.ಎಂ.ಅಬೂಬಕರ್ ಲತೀಫಿ ಎಣ್ಮೂರು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News