ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಎಸ್ಕೆಎಸ್ಸೆಸ್ಸೆಫ್ ವಿಟ್ಲ ವಲಯದಿಂದ ಪ್ರತಿಭಟನೆ

Update: 2018-04-21 09:24 GMT

ಬಂಟ್ವಾಳ, ಎ. 21: ಜಮ್ಮು ಕಾಶ್ಮೀರದಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣವನ್ನು ಖಂಡಿಸಿ ಎಸ್ಕೆಎಸ್ಸೆಸ್ಸೆಫ್ ವಿಟ್ಲ ವಲಯದ ವತಿಯಿಂದ ವಿಟ್ಲದ ಹಳೆ ಬಸ್‌ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.

ಅಕ್ಕರಂಗಡಿ ಮಸೀದಿ ಖತೀಬ್ ಹೈದರ್ ದಾರಿಮಿ ಪ್ರತಿಭಟನ್ನುದ್ದೇಶಿಸಿ ಮಾತನಾಡಿ, ಬಾಲಕಿಯನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ. ದೇಶವೇ ತಲೆತಗ್ಗಿಸುವಂತ ಕೃತ್ಯವಾಗಿದೆ. ಇಂತಹ ಕೃತ್ಯವನ್ನು ಬೆಂಬಲಿಸುವವರು ಈ ದೇಶದಲ್ಲಿರುವುದು ವಿಪರ್ಯಾಸ ಎಂದು ಹೇಳಿದರು.

ಎಸ್ಕೆಎಸ್ಸೆಸ್ಸೆಫ್ ವಿಟ್ಲ ವಲಯ ಅಧ್ಯಕ್ಷ ಅಶ್ರಫ್ ಕಬಕ, ಕಾರ್ಯದರ್ಶಿ ಇಬ್ರಾಹಿಂ ಮುಸ್ಲಿಯಾರ್, ಶರೀಫ್ ಮೂಸ ಕುದ್ದುಪದವು, ಶಮೀರ್ ಪಳಿಕೆ, ವಿ.ಎಸ್ ಇಬ್ರಾಹಿಂ ಒಕ್ಕೆತ್ತೂರು, ಇಬ್ರಾಹಿಂ ಫೈಝಿ, ಅಬ್ದುಲ್ ರಹಿಮಾನ್ ಫೈಝಿ, ಹನೀಫ್, ಇಬ್ರಾಹಿಂ, ಎಂ.ಎಸ್ ಹಮೀದ್, ಶರೀಫ್ ಕೆಲಿಂಜ, ಬಿ.ಎಂ ಅಲಿ ಮೌಲವಿ, ಸ್ವದಖ ಮುಸ್ಲಿಯಾರ್, ಇಬ್ರಾಹಿಂ ಬಾತಿಶ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News