ಸುಕ್ಮಾದಲ್ಲಿ ಎನ್‌ಕೌಂಟರ್: ಸಿಆರ್‌ಪಿಎಫ್ ಯೋಧ ಹುತಾತ್ಮ

Update: 2018-04-21 16:43 GMT

ಬಸ್ತಾರ್, ಎ. 21: ದಕ್ಷಿಣ ಸುಕ್ಮಾದಲ್ಲಿ ಶುಕ್ರವಾರ ರಾತ್ರಿ ನಡೆದ ಎನ್‌ಕೌಂಟರ್ ಸಂದರ್ಭ ಮಾವೋವಾದಿಗಳು ಹಾರಿಸಿದ ಗುಂಡಿಗೆ ಕೇಂದ್ರ ಮೀಸಲು ಪಡೆಯ ಪೊಲೀಸ್‌ನ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಹುತಾತ್ಮರಾಗಿದ್ದಾರೆ. ಪೊಲೀಸ್ ಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಕಿಸ್ತಾರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ಮಾವೋವಾದಿಗಳೊಂದಿಗೆ ಗುಂಡಿನ ಚಕಮಕಿ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಎನ್‌ಕೌಂಟರ್‌ನಲ್ಲಿ ದಕ್ಷಿಣ ಸುಕ್ಮಾದಲ್ಲಿ ನಿಯೋಜಿಸಲಾಗಿದ್ದ ಸಿಆರ್‌ಪಿಎಫ್ 201 ಬೆಟಾಲಿಯನ್‌ನ ಎಎಸ್‌ಐ ಅನಿಲ್ ಕುಮಾರ್ ಮೌರ್ಯ ಮೃತಪಟ್ಟಿದ್ದಾರೆ. ದಟ್ಟ ಅರಣ್ಯದ ನಡುವೆ ಶೋಧ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭ ಎನ್‌ಕೌಂಟರ್ ನಡೆದಿದೆ ಎಂದು ಬಸ್ತಾರ್‌ನ ಡಿಐಜಿ ಸುಂದರ್‌ರಾಜ್ ಪಿ. ಹೇಳಿದ್ದಾರೆ. ಮೌರ್ಯ ಉತ್ತರಪ್ರದೇಶದ ಅಮೇಥಿಯವರು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News