ಮುಂಬೈ ಬಾಂಬ್ ಸ್ಫೋಟ ಪ್ರಕರಣದ ದೋಷಿ ಅಬು ಸಲೇಂಗೆ ಪರೋಲ್ ನಿರಾಕರಣೆ

Update: 2018-04-21 16:48 GMT

ಮುಂಬೈ, ಎ.21: 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿರುವ ಅಬುಸಲೇಂ ಮದುವೆಯ ಕಾರಣ ಪರೋಲ್ ಮೇಲೆ ಬಿಡುಗಡೆಗೆ ಸಲ್ಲಿಸಿರುವ ಮನವಿಯನ್ನು ನವಿ ಮುಂಬೈ ಆಯುಕ್ತರು ಶನಿವಾರ ತಿರಸ್ಕರಿಸಿದ್ದಾರೆ.

ಸಲೇಂಗೆ ಇದು ಎರಡನೇ ಮದುವೆಯಾಗಿದೆ. ಸೈಯದ್ ಬಹರ್ ಕೌಸರ್ ಅಲಿಯಾಸ್ ಹೀನಾ ಜೊತೆ ನಡೆಯಲಿರುವ ವಿವಾಹದ ಹಿನ್ನೆಲೆಯಲ್ಲಿ 45 ದಿನ ಪರೋಲ್ ಮೇಲೆ ಬಿಡುಗಡೆ ಮಾಡಬೇಕೆಂದು 48ರ ಹರೆಯದ ಸಲೇಂ ಮನವಿ ಮಾಡಿಕೊಂಡಿದ್ದ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಳೆದ ವರ್ಷ ಟಾಡಾ ನ್ಯಾಯಾಲಯವು ಸಲೇಂಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು ಈಗ ಮುಂಬೈಯ ತಲೋಜ ಜೈಲಿನಲ್ಲಿದ್ದಾನೆ. ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಮೃತಪಟ್ಟಿದ್ದು 700ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News