ಅಮೆರಿಕದ ಅಣು ಬಾಂಬ್ ಪಿತಾಮಹ ಕ್ರಿಕೋರಿಯಸ್ ನಿಧನ

Update: 2018-04-21 16:54 GMT

 ಲಾಸ್ ಅಲಮಾಸ್ (ಅಮೆರಿಕ), ಎ. 21: ಪರಮಾಣು ಬಾಂಬ್ ತಯಾರಾದ ಅಮೆರಿಕದ ನ್ಯೂ ಮೆಕ್ಸಿಕೊ ರಾಜ್ಯದ ರಹಸ್ಯ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ್ದ ವಿಜ್ಞಾನಿ ನರ್ಸಸ್ ‘ಕ್ರಿಕ್’ ಕ್ರಿಕೋರಿಯನ್ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.

ನಿರಾಶ್ರಿತ ಹೆತ್ತವರಿಗೆ ಹುಟ್ಟಿದ ಕ್ರಿಕೋರಿಯನ್ ಬಳಿಕ ತನ್ನ ಕ್ಷೇತ್ರದಲ್ಲಿ ದಂತಕತೆಯಂತಿದ್ದರು.

ಗುಡ್ಡಗಾಡು ಪಟ್ಟಣ ಲಾಸ್ ಅಲಮೋಸ್‌ನ ತನ್ನ ನಿವಾಸದಲ್ಲಿ ಕ್ರಿಕೋರಿಯನ್ ಬುಧವಾರ ಕೊನೆಯುಸಿರೆಳೆದರು ಎಂದು ಲಾಸ್ ಅಲಮೋಸ್ ನ್ಯಾಶನಲ್ ಲ್ಯಾಬರೇಟರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಪಟ್ಟಣದಲ್ಲಿ ಅವರು 70 ವರ್ಷಗಳಿಗಿಂತಲೂ ಹೆಚ್ಚು ಅವಧಿ ಜೀವಿಸಿದ್ದಾರೆ.

ಕ್ರಿಕೋರಿಯನ್ 1921ರಲ್ಲಿ ಟರ್ಕಿಯಲ್ಲಿ ರಸ್ತೆಯ ಬದಿಯಲ್ಲಿ ಜನಿಸಿದರು. ಅವರ ಹೆತ್ತವರು ನಾಲ್ಕು ವರ್ಷಗಳ ಬಳಿಕ ಅಮೆರಿಕಕ್ಕೆ ತೆರಳಿದರು.

ನಾಲ್ಕು ದಶಕಗಳಿಗೂ ಅಧಿಕ ಅವಧಿಯ ವೃತ್ತಿಜೀವನದಲ್ಲಿ ಅವರು ಯುರೇನಿಯಂ ಜೊತೆಗೆ ಕೆಲಸ ಮಾಡಿದರು. 1950ರ ದಶಕದಲ್ಲಿ ಬಾಹ್ಯಾಕಾಶ ಉದ್ದೇಶದ ನ್ಯೂಕ್ಲಿಯರ್ ಥರ್ಮಲ್ ರಾಕೆಟ್ ಅಭಿವೃದ್ಧಿ ಯೋಜನೆಯಲ್ಲಿ ಕೆಲಸ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News