ಸಚಿವ ಪ್ರಮೋದ್ ಮಧ್ವರಾಜ್ ಅವರ ಆಸ್ತಿ ಎಷ್ಟು ಕೋಟಿ ಗೊತ್ತೇ ?

Update: 2018-04-23 16:54 GMT

ಉಡುಪಿ, ಎ.23: ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸಲ್ಲಿಸಿರುವ ನಾಮಪತ್ರದ ಅಫಿದಾವಿತ್‌ನಲ್ಲಿ ಒಟ್ಟು 78.46 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಘೋಷಿಸಿದ್ದು, 2013ರ ಚುನಾವಣೆಯಲ್ಲಿ ಘೋಷಿಸಿರುವ (105.17 ಕೋಟಿ ರೂ.) ಆಸ್ತಿಗೆ ಹೋಲಿಕೆ ಮಾಡಿದರೆ ಅವರ ಆಸ್ತಿಯಲ್ಲಿ ಸಾಕಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ.

ಒಟ್ಟು 76,14,02,096.87 ರೂ. ಮೌಲ್ಯದ ಚರಾಸ್ತಿ ಹಾಗೂ ಒಟ್ಟು 2,32,92,000 ರೂ. ಮೌಲ್ಯದ ಸ್ಥಿರಾಸ್ಥಿಯನ್ನು ಹೊಂದಿರುವ ಪ್ರಮೋದ್ ಮಧ್ವರಾಜ್, ರೇಂಜ್‌ರೋವರ್, ಬೆಂಜ್‌ನಂತಹ ಐಷರಾಮಿ ಕಾರುಗಳನ್ನು ಹೊಂದಿದ್ದರೂ ಅಫಿದಾವಿಟ್‌ನಲ್ಲಿ ಯಾವುದೇ ಕಾರು, ಸ್ವಂತ ವಾಹನ ಇಲ್ಲ ಎಂಬುದಾಗಿ ಘೋಷಿಸಿದ್ದಾರೆ. ಅದೇ ರೀತಿ ಪತ್ನಿ ಹಾಗು ಮಗಳ ಹೆಸರಿನಲ್ಲೂ ವಾಹನಗಳಿಲ್ಲ.

ಪ್ರಮೋದ್ ಪತ್ನಿ ಸುಪ್ರಿಯಾ ಪ್ರಮೋದ್ ಹೆಸರಿನಲ್ಲಿ ಒಟ್ಟು 4,51,06,730. 01 ರೂ. ಮೌಲ್ಯದ ಚರಾಸ್ತಿ ಮತ್ತು 1,34,61,660 ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪುತ್ರಿ ಪ್ರತ್ಯಕ್ಷ ಪ್ರಮೋದ್, 81,51,836 ರೂ. ಮೌಲ್ಯದ ರಾಜ್ ಫಿಶ್ ಮಿಲ್ ಸೇರಿದಂತೆ ಒಟ್ಟು 1,82,13,346 ರೂ. ಆಸ್ತಿಯನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News