ಉಡುಪಿ: ​ಸಾರ್ವಜನಿಕ ಪ್ರತಿಭಟನೆಯ ಸ್ಥಳ ಬದಲಾವಣೆ

Update: 2018-04-23 17:35 GMT

ಉಡುಪಿ, ಎ.23: ಮಹಿಳೆಯರ ಮೇಲಿನ ಅತ್ಯಾಚಾರವನ್ನು ಖಂಡಿಸಿ ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಆಶ್ರಯದಲ್ಲಿ ಎ. 24ರಂದು ಸಂಜೆ 6.30ಕ್ಕೆ ಹಮ್ಮಿಕೊಳ್ಳಲಾದ ‘ಬೆಳಕಿನೊಂದಿಗೆ ನಮ್ಮ ನಡಿಗೆ’ ಸಾರ್ವಜನಿಕ ಪ್ರತಿಭಟನೆಯನ್ನು ಕಾರಣಾಂತರ ದಿಂದ ನಗರದ ಚಿತ್ತರಂಜನ್ ಸರ್ಕಲ್ ಬದಲು ಅಜ್ಜರಕಾಡು ಭುಜಂಗಪಾರ್ಕ್‌ನಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ.

ಸಮಾವೇಶ ಯಶಸ್ವಿಗೆ ಕರೆ

ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ, ಕೋಮು ಸೌಹಾರ್ದ ವೇದಿಕೆ ಹಾಗೂ ಅಲ್ಪಸಂಖ್ಯಾತ ಮುಸ್ಲಿಮ್, ಕ್ರೈಸ್ತ ಸಂಘಟನೆಗಳ ಸಹಭಾಗಿತ್ವದಲ್ಲಿ ಎ.24ರಂದು ಸಂಜೆ 4.30ಕ್ಕೆ ಅಜ್ಜರಕಾಡು ಭುಜಂಗಪಾರ್ಕ್‌ನ ಬಯಲು ರಂಗ ಮಂದಿರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ‘ಸಂವಿಧಾನ ರಕ್ಷಿಸಿ, ದೇಶ ಉಳಿಸಿ’ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News